Bengaluru CityCinemaKarnatakaLatestSandalwood

ಚಾಲೆಂಜಿಂಗ್ ಸ್ಟಾರ್ ಸ್ವೀಟೆಸ್ಟ್ ಅಂದ್ರು ರಶ್ಮಿಕಾ ಮಂದಣ್ಣ!

ಬೆಂಗಳೂರು: ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ನಂತರದಲ್ಲಿ ರಶ್ಮಿಕಾ ಮಂದಣ್ಣ ಮಾಧ್ಯಮಗಳಿಂದ ಒಂದಂತರ ಕಾಯ್ದುಕೊಂಡೇ ಬಂದಿದ್ದರು. ಆದರೆ ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ರಶ್ಮಿಕಾ ಮಾಧ್ಯಮದವರನ್ನು ಮುಖಾಮುಖಿಯಾಗಿದ್ದಾರೆ. ಇದೇ ನೆಪದಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಸ್ಫುಟವಾಗಿಯೇ ಮಾತಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಸ್ವೀಟೆಸ್ಟ್ ಅಂದ್ರು ರಶ್ಮಿಕಾ ಮಂದಣ್ಣ!

ರಶ್ಮಿಕಾ ಮಂದಣ್ಣ ಯಜಮಾನ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ಆಯ್ಕೆಯಾದಾಗಲೇ ಎಲ್ಲರೂ ಹುಬ್ಬೇರಿಸಿದ್ದರು. ಈ ಹುಡುಗಿಯ ಅದೃಷ್ಟದ ಬಗ್ಗೆ ಅಚ್ಚರಿಗೊಂಡಿದ್ದರು. ಇದೀಗ ಯಜಮಾನ ಚಿತ್ರೀಕರಣದ ಅನುಭವಗಳನ್ನು ರಶ್ಮಿಕಾ ಬಿಚ್ಚಿಟ್ಟಿದ್ದಾರೆ. ಈ ಚಿತ್ರೀಕರಣದ ಪ್ರತೀ ಹಂತವನ್ನೂ ಎಂಜಾಯ್ ಮಾಡಿರೋದಾಗಿ ಹೇಳಿಕೊಂಡಿರೋ ರಶ್ಮಿಕಾ ‘ದರ್ಶನ್ ಓರ್ವ ಸ್ವೀಟೆಸ್ಟ್ ವ್ಯಕ್ತಿ’ ಅಂತ ಬಣ್ಣಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಸ್ವೀಟೆಸ್ಟ್ ಅಂದ್ರು ರಶ್ಮಿಕಾ ಮಂದಣ್ಣ!

ಇನ್ನು ಇದೇ ಸಂದರ್ಭದಲ್ಲಿ ರಶ್ಮಿಕಾ ಆತ್ಮಾವಲೋಕನವನ್ನೂ ಮಾಡಿಕೊಂಡಿದ್ದಾರೆ. ಈ ವರ್ಷ ಅವರು ನಟಿಸಿರೋ ಯಾವ ಕನ್ನಡ ಚಿತ್ರವೂ ಬಿಡುಗಡೆಯಾಗದಿರೋ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. ಯಜಮಾನ ಈ ವರ್ಷವೇ ಬಿಡುಗಡೆಯಾಗುತ್ತದೆ ಅಂತ ಅವರು ಖುಷಿಗೊಂಡಿದ್ದರಂತೆ. ಆದರೆ ಅದು ಪೋಸ್ಟ್ ಪೋನ್ ಆದರೂ ಮುಂದಿನ ವರ್ಷ ತನ್ನ ಸಿನಿಮಾ ಹಂಗಾಮಾ ಶುರುವಾಗಲಿದೆ ಎಂಬ ಸೂಚನೆಯಂತೂ ರಶ್ಮಿಕಾ ಕಡೆಯಿಂದ ಸಿಕ್ಕಿದೆ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Related Articles

Leave a Reply

Your email address will not be published. Required fields are marked *