ಬೆಂಗಳೂರು: `ಕಿರಿಕ್ ಪಾರ್ಟಿ’ ಚೆಲುವೆ, ‘ಅಂಜನಿಪುತ್ರ’ನ ರಾಣಿ, ರಶ್ಮಿಕಾ ಮಂದಣ್ಣ ಅವರಿಗೆ ಜೀ ವಾಹಿನಿಯ ‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ಒಲಿದಿದೆ. ಕಾರ್ಯಕ್ರಮದಲ್ಲಿ 61 ವರ್ಷಗಳಷ್ಟು ಹಳೆಯದಾದ ಸೀರೆಯನ್ನು ತೊಟ್ಟು ರಶ್ಮಿಕಾ ಪಾಲ್ಗೊಂಡಿದ್ದು, ತಮ್ಮ ಸೀರೆಯ ಮೂಲಕ ಎಲ್ಲರ ಗಮನವನ್ನ ಸೆಳೆದಿದ್ದಾರೆ.
ಕೂರ್ಗಿ ಸ್ಟೈಲ್‍ನಲ್ಲಿ ರಶ್ಮಿಕಾ ಮಂದಣ್ಣ ಸೀರೆ ಧರಿಸಿದ್ದು, ಮೆರೂನ್ ಬಣ್ಣದ ಸೀರೆಗೆ ಗ್ರೀನ್ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ರಶ್ಮಿಕಾ ಧರಿಸಿದ್ದ ಸೀರೆಯ ಹಿಂದೆ ಒಂದು ಇತಿಹಾಸ ಕೂಡ ಇದೆ.
ಈ ಸೀರೆಯನ್ನು ರಶ್ಮಿಕಾ ಅಜ್ಜಿ ಅವರ ಮದುವೆಯಲ್ಲಿ ಧರಿಸಿದ್ದರಂತೆ. ಅಜ್ಜಿ ಅದನ್ನು ರಶ್ಮಿಕಾ ಅವರ ತಾಯಿಗೆ ನೀಡಿದ್ದಾರೆ. ಈಗ ರಶ್ಮಿಕಾ ತಾಯಿ ಅದನ್ನು ರಶ್ಮಿಕಾ ಅವರಿಗೆ ನೀಡಿದ್ದಾರೆ. ರಶ್ಮಿಕಾ ಈ ಸೀರೆ ಧರಿಸುತ್ತಿರುವ ಮೂರನೇಯ ತಲೆಮಾರಿನವರು.
”ನಾನು ಬೆಳೆದದ್ದು ಅಜ್ಜಿ ಬಳಿಯೇ. ನಾನು ಜೀವನದಲ್ಲಿ ‘ಏನೋ ಒಂದು ಆಗುವೆ’ ಎಂದು ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಅವರು ನಮ್ಮನ್ನು ಬಿಟ್ಟು ಹೋದಾಗ ನನಗೆ ಕೋಪ ಬಂದಿತ್ತು. ನಾವರನ್ನು ಈಗಲೂ ತುಂಬಾ ಮಿಸ್ ಮಾಡುತ್ತಿರುವೆ. ಈಗ ಅಜ್ಜಿ ನನ್ನ ನೋಡಿ ಹೆಮ್ಮೆ ಪಡುತ್ತಿರಬಹುದು. ಆಕೆಯ ಸೀರೆ ಧರಿಸಿ ಈ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆಯಾಗಿದೆ. ನನಗೆ ಸಿಕ್ಕಿರುವುದು ನನ್ನ ಮುಂದಿನ ಪೀಳಿಗೆಗೂ ಹೋಗಬೇಕಾಗಿದೆ. ಆದ್ದರಿಂದ ಇದರ ಬಗ್ಗೆ ನನಗೆ ತುಂಬಾ ಸೆಂಟಿಮೆಂಟ್” ಎಂದು ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/p/Bf43-ZkF_Km/?taken-by=rashmika_mandanna