ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಪ್ರಸ್ತುತ ಎಲ್ಲಾ ಭಾಷೆಯಲ್ಲೂ ಮಿಂಚುತ್ತಿದ್ದಾರೆ. ಸದಾ ಒಂದಲ್ಲಾ ಒಂದು ವಿಷ್ಯವಾಗಿ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ಸದ್ಯ ರಶ್ಮಿಕಾ ತಮ್ಮ ಟ್ಯಾಟೂ (Tattoo) ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ತಮ್ಮ Irreplaceble ಟ್ಯಾಟೂ ಕುರಿತು ಅಚ್ಚರಿಯ ವಿಚಾರವೊಂದನ್ನ ನಟಿ ರಿವೀಲ್ ಮಾಡಿದ್ದಾರೆ.
View this post on Instagram
Advertisement
ರಶ್ಮಿಕಾ ಮಂದಣ್ಣ ಬಣ್ಣದ ಜಗತ್ತಿಗೆ ಕಾಲಿಟ್ಟ ವೇಳೆಯಿಂದ ಸಿನಿಮಾ ಜೊತೆ ವಿವಾದಗಳಿಂದ (Controversy) ಕೂಡ ಸುದ್ದಿಯಾಗುತ್ತಲೇ ಬಂದಿದ್ದಾರೆ. ಈಗ ಸಂದರ್ಶನವೊಂದರಲ್ಲಿ ತನ್ನ ಟ್ಯಾಟೂ ಹಿಂದಿನ ಕಥೆಯನ್ನ ನಟಿ ಬಿಚ್ಚಿಟ್ಟಿದ್ದಾರೆ. ʻIrreplacebleʼ ಎಂಬ ಪದವನ್ನೇ ಹಚ್ಚೆ ಹಾಕಿಸಿಕೊಳ್ಳಲು ಏಕೆ ಆರಿಸಿಕೊಂಡೆ ಎಂಬುದನ್ನ ನಟಿ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ನಂದು- ಜಶ್ವಂತ್ ಬ್ರೇಕಪ್ಗೆ ಕಾರಣವಾದ್ರಾ ಸಾನ್ಯ ಅಯ್ಯರ್?
Advertisement
View this post on Instagram
Advertisement
ನನಗೆ ಟ್ಯಾಟೂ ಹಾಕಿಸಿಕೊಳ್ಳುವ ಐಡಿಯಾ ಇರಲಿಲ್ಲ. ಒಂದು ದಿನ ನಾನು ಕಾಲೇಜಿನಲ್ಲಿದ್ದಾಗ ನನ್ನ ಸ್ನೇಹಿತನೊಬ್ಬ, ಹುಡುಗಿಯರು ಜಾಸ್ತಿ ನೋವು ಅನುಭವಿಸುವುದಿಲ್ಲ. ಅವರು ಸೂಜಿಗೆ ತುಂಬಾ ಹೆದರುತ್ತಾರೆ ಎಂದು ಮಾತನಾಡಿದ್ದ. ಅಂದು ಅವನ ಮಾತನ್ನ ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆ, ಅವನ ಮಾತಿಗೆ ರೆಬೆಲ್ ಆಗಿದ್ದೆ, ಹಾಗಾಗಿ ಕೈ ಮೇಲೆ ಹಚ್ಚೆ ಹಾಕಿಸಿಕೊಂಡೆ.
Advertisement
ಆ ದಿನ ಏನು ಹಚ್ಚೆ ಹಾಕಿಸಿಕೊಳ್ಳಬೇಕು ಎಂದು ನನಗೆ ತಿಳಿದಿರಲಿಲ್ಲ. ಕುಳಿತುಕೊಂಡು ಈ ಬಗ್ಗೆ ಯೋಚಿಸಿದೆ. ನಾನು ಯಾವಾಗಲೂ ನಾನು ನಾನಾಗಿಯೇ ಇರಲು ಇಷ್ಟಪಡುತ್ತೇನೆ. ಪ್ರತಿಯೊಬ್ಬ ಮನುಷ್ಯನ ಸ್ಥಾನವನ್ನು ಯಾರು ತುಂಬಲಾರರು ಎಂದು ನಾನು ನಂಬುತ್ತೇನೆ. ಬೇರೆ ಯಾರು ನೀವು ಆಗಿರಲು ಸಾಧ್ಯವಿಲ್ಲ. ʻIrreplacebleʼ ತುಂಬಲಾಗದ ಎಂದರ್ಥ. ಹಾಗಾಗಿ ಈ ಪದವನ್ನ ನಾನು ಹಚ್ಚೆ ಹಾಕಿಸಿಕೊಂಡೆ ಎಂದು ರಶ್ಮಿಕಾ ಮಾತನಾಡಿದ್ದಾರೆ. ಟ್ಯಾಟೂ ಹಿಂದಿನ ಸೀಕ್ರೆಟ್ ಬಗ್ಗೆ ನಟಿ ಮಾತನಾಡಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k