ಕೊಡಗಿನ ಬೆಡಗಿ ಮಂದಣ್ಣಗೆ (Rashmika Mandanna) ಕೊರಿಯನ್ ಡ್ರಾಮಾ ಅಂದರೆ ಇಷ್ಟ. ಆ್ಯನಿಮೇಷನ್ ಸಿನಿಮಾಗಳಿಗೂ ಅವರು ಫ್ಯಾನ್ ಆಗಿದ್ದಾರೆ. ಸದ್ಯ ಆ್ಯನಿಮೇಷನ್ ಪಾತ್ರದ ಲುಕ್‌ನಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ಲುಕ್‌ನ ಸುಂದರ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
ಆ್ಯನಿಮೇಷನ್ ಸಿನಿಮಾ ‘ಕೈಜು ನಂ.8’ರ ಪಾತ್ರದಲ್ಲಿ ಲುಕ್‌ನಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಈ ಆ್ಯನಿಮೆ (Anime) ಪ್ರಚಾರದಲ್ಲೂ ನಟಿ ತೊಡಗಿಸಿಕೊಂಡಿದ್ದಾರೆ. ‘ಕೈಜು ನಂ.8’ ಸ್ಟೋರಿ ತೆಲುಗು ಮತ್ತು ತಮಿಳಿನಲ್ಲಿಯೂ ಡಬ್ ಆಗಿ ಬರುತ್ತಿದೆ ಎಂದು ಕೂಡ ನಟಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಅಂದಹಾಗೆ, ಇತ್ತೀಚೆಗೆ ಟೋಕಿಯೋದಲ್ಲಿ ನಡೆದ ಆ್ಯನಿಮೆ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆ್ಯನಿಮೇಷನ್ ಮೇಲಿನಿ ಪ್ರೀತಿಯನ್ನು ‘ಪುಷ್ಪ 2’ (Pushpa 2) ನಟಿ ಹಂಚಿಕೊಂಡಿದ್ದರು.
View this post on Instagram
ಇನ್ನೂ ರಶ್ಮಿಕಾ ನಯಾ ಲುಕ್‌ಗೆ ಆ್ಯನಿಮೆ ಪ್ರಿಯರು ಫಿದಾ ಆಗಿದ್ದಾರೆ. ನಟಿಯ ಲುಕ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:‘ಕೊಕೇನ್’ಗೆ ಪ್ರಥಮ್ ಹೀರೋ : ಕೌರವ ವೆಂಕಟೇಶ್ ನಿರ್ದೇಶನ
ಇನ್ನೂ ಪುಷ್ಪ 2, ಅನಿಮಲ್ ಪಾರ್ಕ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಚಾವಾ, ಸಿಖಂದರ್ (Sikandar) ಸಿನಿಮಾ ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.