ಚಿತ್ರರಂಗದಲ್ಲಿ ನ್ಯಾಷನಲ್ ಕ್ರಶ್ ಆಗಿ ಫುಲ್ ಕ್ರೇಜ್‌ನಲ್ಲಿದ್ದ ರಶ್ಮಿಕಾ ಮಂದಣ್ಣ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಕರ್ನಾಟಕದಲ್ಲಿ ಕೊಡಗಿನ ಕುವರಿ ಬ್ಯಾನ್ ಆಕ್ರೋಶದ ಬೆನ್ನಲ್ಲೇ ಪ್ರತಿಷ್ಠಿತ ಕಂಪನಿ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾರನ್ನ ಔಟ್ ಮಾಡಿದ್ದಾರೆ.
ಕನ್ನಡದ ಸಿನಿಮಾ ಮೂಲಕ ಬದುಕು ಆರಂಭಿಸಿ, ಇಂದು ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿರುವ ಲಕ್ಕಿ ನಟಿ ರಶ್ಮಿಕಾಗೆ ಅದ್ಯಾಕೋ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚೆಗೆ ತನ್ನ ವೃತ್ತಿ ಬದುಕಿನಲ್ಲಿ ಮೊದಲ ಹಿಟ್ ಸಿನಿಮಾ ನೀಡಿದ ನಿರ್ದೇಶಕ ರಿಷಬ್ ಶೆಟ್ಟಿ ತಂಡದವನ್ನು ಕಡೆಗಣಿಸಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಚಿತ್ರದ ನಿರ್ಮಾಣ ಸಂಸ್ಥೆ ಹೆಸರು ಹೇಳದಿರುವುದಕ್ಕೆ ನಟಿ ಕೆಟ್ಟದಾಗಿ ಟ್ರೋಲ್ ಕೂಡ ಆಗಿದ್ದರು. ಈ ಬೆನ್ನಲ್ಲೇ ಪುಷ್ಪ ನಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಮಲೈಕಾ ಅರೋರಾ
ಪ್ರತಿಷ್ಠಿತ ಆಭರಣ ಸಂಸ್ಥೆಯೊಂದು ಬ್ರ್ಯಾಂಡ್ ಅಂಬಾಸಿಡರ್ ಆಗಿ ರಶ್ಮಿಕಾ ಮಂದಣ್ಣ ಅವರನ್ನ ನೇಮಿಸಿಕೊಂಡಿತ್ತು. ಇದೀಗ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ವಜಾಗೊಳಿಸಿದ್ದಾರೆ. ನಟಿಯ ವಿವಾದಗಳಿಂದ ಕರ್ನಾಟಕ ಚಿತ್ರರಂಗ ಬ್ಯಾನ್ ಮಾಡಬೇಕು ಎಂಬ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಆಭರಣ ಸಂಸ್ಥೆಯು ರಶ್ಮಿಕಾರನ್ನ ಕೈಬಿಟ್ಟಿದೆ.
ರಶ್ಮಿಕಾ ಅವರ ಬದಲು ನಟಿ ತ್ರಿಷಾ ಅವರನ್ನ ಕರೆತರಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ತನ್ನ ವೃತ್ತಿ ಸಾಧನೆಯಿಂದ ಕನ್ನಡ, ತೆಲುಗು ಬಳಿಕ ಹಿಂದಿಗೆ ಹಾರಿದ್ದ ರಶ್ಮಿಕಾ ಅವರ ವೃತ್ತಿ ಬದುಕಿನಲ್ಲಿ ಈಗ ಒಂದೊಂದೆ ಸಂಕಷ್ಟ ಎದುರಾಗುತ್ತಿದೆ.