ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಕಿರಿಕ್ ಪಾರ್ಟಿ (Kirik Party) ಸಿನಿಮಾ ತೆರೆಕಂಡು ಇಂದಿಗೆ (ಡಿ.30) 9 ವರ್ಷಗಳು. ಈ ಸಂಭ್ರಮವನ್ನು ನಟಿ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 2016ರ ಡಿಸೆಂಬರ್ 30ರಂದು ಕಿರಿಕ್ ಪಾರ್ಟಿ ಸಿನಿಮಾ ತೆರೆಕಂಡು ಭರ್ಜರಿ ರೆಸ್ಪಾನ್ಸ್ ಕಂಡಿತ್ತು.
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ ಕಿರಿಕ್ ಪಾರ್ಟಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಸಿನಿಮಾ ತೆರೆಕಂಡು ಇಲ್ಲಿಗೆ ಭರ್ತಿ ಒಂಭತ್ತು ವರ್ಷ. ಜೊತೆಗೆ ರಶ್ಮಿಕಾ ಸಿನಿಮಾ ಪಯಣಕ್ಕೂ ಕೂಡಾ ಒಂಭತ್ತು ವರ್ಷಗಳಾಗಿವೆ. ಈ ಸಂಭ್ರಮದ ಕ್ಷಣವನ್ನ ನಟಿ ರಶ್ಮಿಕಾ ಮಂದಣ್ಣ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹಿನ್ನೋಟ: ಧುರಂಧರ್, ಕಾಂತಾರದಿಂದ ಹೌಸ್‌ಫುಲ್‌ವರೆಗೆ – 2025ರಲ್ಲಿ ತೆರೆಕಂಡ 10 ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳಿವು!
ಸದ್ಯ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿದೇಶದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ತೆರಳಿದ್ದಾರೆ. 2026ರ ಫೆ.26ರಂದು ಜೈಪುರದಲ್ಲಿ ವಿವಾಹವಾಗಲಿರುವ ಈ ಜೋಡಿ ಹೊಸ ವರ್ಷವನ್ನ ಅದ್ಧೂರಿಯಾಗಿ ಬರಮಾಡಿಕೊಳ್ಳಲು ವಿದೇಶಕ್ಕೆ ತೆರಳಿದ್ದಾರೆ. ಇದರ ಮಧ್ಯದಲ್ಲೂ ತಮ್ಮ ಸಿನಿಮಾ ಜರ್ನಿಯ ಸಂಭ್ರಮವನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

