ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಬರುತ್ತಿವೆ. ಬಿಡುವಿಲ್ಲದೇ ಸಿನಿಮಾದ ಪ್ರಚಾರದಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಹಲವಾರು ವಿಚಾರಗಳನ್ನ ಸಂದರ್ಶನದಲ್ಲಿ ಇತ್ತೀಚೆಗೆ ಮಾತಾಡಿದ್ದಾರೆ. ತಮ್ಮ ನಿಶ್ಚಿತಾರ್ಥ, ವಿಜಯ್ ಜೊತೆಗಿನ ಮದುವೆ ಹೀಗೆ ಒಂದೊಂದೇ ವಿಚಾರಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಇತ್ತೀಚೆಗೆ ಜಗಪತಿ ಬಾಬು ಅವರ ಜೊತೆಗಿನ ಸಂದರ್ಶನದಲ್ಲಿ ಐಟಂ ಸಾಂಗ್ ಹಾಗೂ ನೆಗೆಟಿವ್ ಶೇಡ್ ಇರುವ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಅಂದಹಾಗೆ ಜಗಪತಿ ಬಾಬು ಕೇಳಿದ ನೆಗೆಟಿವ್ ಶೇಡ್ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಸ್ಪೆಷಲ್ ಸಾಂಗ್ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ರಶ್ಮಿಕಾ, `ಬೇರೆ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ಸ್ ಮಾಡೋಕೆ ಸಿದ್ಧ. ಆದರೆ ಆ 4 ಜನ ನಿರ್ದೇಶಕರ ಸಿನಿಮಾಗಳಲ್ಲಿ ಮಾತ್ರ. ಅದು ಯಾರು ಎಂದು ನಾನು ಹೇಳಲ್ಲ. ಅವರು ಕೇಳಿದ್ರೆ ಮಾತ್ರ ಐಟಂ ಸಾಂಗ್ ಮಾಡ್ತೀನಿ. ಅದು ಬಿಟ್ಟು ಬೇರೆ ಯಾರೇ ಕೇಳಿದ್ರು ನಾನು ಡ್ಯಾನ್ಸಿಂಗ್ ನಂಬರ್‌ಗೆ ಹೆಜ್ಜೆ ಹಾಕಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಇದನ್ನೂ ಓದಿ: 20 ವರ್ಷದ ಯುವತಿಯಿಂದ ನಟಸಾರ್ವಭೌಮ ಬೆಡಗಿಗೆ ಕಾಟ

