ಬೆಂಗಳೂರು: ಸಮಯದ ಅಭಾವದಿಂದ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಆಗಲಿಲ್ಲ ಎಂದು ನಟಿ ರಶ್ಮಿಕಾ ಮಂದಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದೇ ಶುಕ್ರವಾರ ‘ಪುಷ್ಪ’ ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿತು. ಈ ವೇಳೆ ರಶ್ಮಿಕಾ ಮಾತನಾಡಿದ್ದು, ತುಂಬಾ ದಿನ ಆಗಿತ್ತು. ತುಂಬಾ ಖುಷಿಯಾಗುತ್ತಿದೆ. ಈ ಡಿ.17 ‘ಪುಷ್ಪ’ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲರೂ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ಬಂದು ನೋಡಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಅಲ್ಲು ಅರ್ಜುನ್
Advertisement
Advertisement
ನನ್ನ ಪಾತ್ರದ ಬಗ್ಗೆ ಹೇಳಬೇಕಾದರೆ ನೀವೆಲ್ಲರೂ ಟ್ರೇಲರ್ ನೋಡಿದ್ದೀರಿ. ನಿಮ್ಮೆಲ್ಲರಿಗೂ ಖುಷಿಯಾಗಿದೆ ಎಂದು ನಾನು ಭಾವಿಸಿದ್ದೇನೆ. ನಮ್ಮ ‘ಪುಷ್ಪ’ ಸಿನಿಮಾದಲ್ಲಿ ಎಲ್ಲ ಕಲಾವಿದರು ಪರಿಶ್ರಮದಿಂದ ಕೆಲಸ ಮಾಡುತ್ತಿರುವುದು ಟ್ರೆಲರ್, ಸಾಂಗ್ ನಲ್ಲಿ ಕಾಣಿಸುತ್ತಿದೆ. ಇಂತಹ ಅದ್ಭುತ ಕಲಾವಿದರ ಜೊತೆ ಕೆಲಸ ಮಾಡಿದ್ದು, ತುಂಬಾ ಸಂತೋಷವಾಗುತ್ತಿದೆ. ಈ ವೇಳೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ ಎಂದರು.
Advertisement
ಈ ಸಿನಿಮಾಗಾಗಿ ನಾನು ಸಹ ತುಂಬಾ ಕಾಯುತ್ತಿದ್ದೇನೆ. ನಾನು ಈ ಸಿನಿಮಾವನ್ನು ಅಭಿಮಾನಿಗಳ ಜೊತೆಯಲ್ಲಿಯೇ ಕುಳಿತು ನೋಡುತ್ತೇನೆ. ಸುಕುಮಾರ್ ಸರ್ ಇಲ್ಲಿ ಇರಬೇಕು ಎಂದು ಆಸೆ ಪಡುತ್ತಿದ್ದೆ. ಆದರೆ ಪೋಸ್ಟ್ ಪ್ರೋಡಕ್ಷನ್ ಕೆಲಸದಿಂದ ಅವರು ಇಲ್ಲಿಗೆ ಬಂದಿಲ್ಲ ಎಂದು ತಿಳಿಸಿದರು.
Advertisement
‘ಶ್ರೀವಲ್ಲಿ’ ಪಾತ್ರವನ್ನು ನಾನು ಮಾಡುತ್ತೇನೆ ಎಂದು ತಿಳಿದುಕೊಂಡಿರಲಿಲ್ಲ. ಆದರೆ ಸುಕುಮರ್ ಅವರು ನನ್ನ ಕೈಯಲ್ಲಿ ಆ ಪಾತ್ರವನ್ನು ಮಾಡಿಸಿದ್ದಾರೆ. ಅವರು ಒಂದು ಹೊಸ ಪ್ರಪಂಚವನ್ನೇ ಈ ಸಿನಿಮಾ ಸೃಷ್ಟಿಸಿದ್ದಾರೆ. ಭಿನ್ನ ಪ್ರಪಂಚವನ್ನು ಮಾಡಿದ್ದಾರೆ. ಎಷ್ಟೊಂದು ಪ್ರಯತ್ನ, ಸಮಯ, ಬಂಡವಾಳವನ್ನು ಹಾಕಿ ಈ ಸಿನಿಮಾವನ್ನು ಮಾಡಿದ್ದಾರೆ. ಅದು ಒಂದು ಒಳ್ಳೆಯ ರೀತಿಯಲ್ಲಿ ಮೂಡಿಬಂದಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ದುರದೃಷ್ಟಕರ ಎಂದರೆ ಈ ಸಿನಿಮಾದಲ್ಲಿ ಸಮಯದ ಅಭಾವದಿಂದ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಆಗಲಿಲ್ಲ. ಆದರೆ ಈ ಸಿನಿಮಾ ನೋಡಿ ಎಲ್ಲರೂ ಇಷ್ಟ ಪಡುತ್ತಾರೆ ಎಂದು ಭಾವಿಸಿದ್ದೇನೆ. ಈ ಸಿನಿಮಾ ನೋಡಿದರೆ ಇದರ ಪರಿಶ್ರಮ ಕಾಣಿಸುತ್ತೆ ಎಂದರು.
ಈ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ನನಗೆ ಅಲ್ಲು ಅರ್ಜುನ್ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು. ಅದು ಅಲ್ಲದೇ ಅವರು ನನಗೆ ನಟಿಸಲು ತುಂಬಾ ಕಂಫರ್ಟ್ ಜೋನ್ ಕೊಟ್ಟಿದ್ದರು. ಅದಕ್ಕೆ ನಾನು ಅವರಿಗೆ ಧನ್ಯವಾದವನ್ನು ಹೇಳುತ್ತೇನೆ. ಶ್ರೀವಲ್ಲಿ ಪಾತ್ರವನ್ನು ಮಾಡಲು ಅವರು ಪೂರ್ತಿಯಾಗಿ ನನಗೆ ಬೆಂಬಲವನ್ನು ನೀಡಿದ್ದರು ಎಂದರು. ಇದನ್ನೂ ಓದಿ: ಶ್ರೀನಿವಾಸ್ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್
ಅದು ಅಲ್ಲದೇ ಧನಂಜಯ್ ಅವರ ಜೊತೆಗೂ ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ. ಅದು ನನಗೆ ಇನ್ನು ಸಂತೋಷವನ್ನು ತಂದುಕೊಟ್ಟಿದೆ. ಸೆಟ್ ನಲ್ಲಿ ಇಬ್ಬರು ಕನ್ನಡಿಗರು ನಮ್ಮ ಭಾಷೆಯಲ್ಲಿ ಮಾತನಾಡುವುದು ಮನೆಯಲ್ಲಿ ಇದ್ದೇನೆ ಎಂಬ ಭಾವವನ್ನು ಕೊಟ್ಟಿತು ಎಂದರು.
ನಿಮ್ಮ ಡ್ಯಾನ್ಸ್ ಅನ್ನ ಎಲ್ಲ ಹುಡುಗಿಯರು ಟ್ರೈ ಮಾಡುತ್ತಿದ್ದಾರೆ. ಈ ಬಗ್ಗೆ ನಿಮಗೆ ಎಷ್ಟು ಖುಷಿಯಿದೆ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು. ನನಗೆ ತುಂಬಾ ಖುಷಿಯಾಗಿದೆ. ಎಲ್ಲ ಹುಡುಗಿಯರು, ಅದರಲ್ಲಿಯೂ ಹುಡುಗರೂ ಸಹ ಈ ಡ್ಯಾನ್ಸ್ ಅನ್ನು ಕಾಪಿ ಮಾಡುತ್ತಿರುವುದು ನನಗೆ ತುಂಬಾ ಸಂತೋಷವನ್ನು ತರುತ್ತಿದೆ. ಇದರಿಂದ ನಮಗೆ ಇದರ ಹಿಂದಿನ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಅನಿಸುತ್ತೆ ಎಂದರು.