ರಶ್ಮಿಕಾ ಮಂದಣ್ಣ (Rashmika Mandanna), ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ (Animal) ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರದ ಮುಂದುವರೆದ ಭಾಗಕ್ಕಾಗಿ ಅಭಿಮಾನಿಗಳು ಕೂಡ ಎದುರು ನೋಡ್ತಿದ್ದಾರೆ. ಇದೀಗ ಅನಿಮಲ್ ಪಾರ್ಕ್ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್, ರಶ್ಮಿಕಾ, ತೃಪ್ತಿ ದಿಮ್ರಿ ಮೂವರು ಸಿಕ್ಕಾಪಟ್ಟೆ ಹೈಲೆಟ್ ಆಗಿದ್ದರು. ಅದರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರು ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದರು.
ಇದರ ಪಾರ್ಟ್ 2 ‘ಅನಿಮಲ್ ಪಾರ್ಕ್’ ಯಾವಾಗ ಬರಲಿದೆ ಎಂಬುದಕ್ಕೆ ಮಾಹಿತಿ ಸಿಕ್ಕಿದೆ. ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದ ಕೆಲಸ ಮುಗಿದ ಮೇಲೆ ರಿಲೀಸ್ ನಂತರ ಅನಿಮಲ್ ಪಾರ್ಕ್ ಚಿತ್ರವನ್ನು ಸಂದೀಪ್ ಕೈಗೆತ್ತಿಕೊಳ್ಳಲಿದ್ದಾರೆ. 2026ರಲ್ಲಿ ಈ ಸಿನಿಮಾ ಬೆಳ್ಳಿಪರದೆಯ ಮೇಲೆ ತೋರಿಸುವ ಪ್ಲ್ಯಾನ್ ಮಾಡಿದ್ದಾರೆ.
‘ಅನಿಮಲ್’ ಭಾಗ 2ರಲ್ಲಿ ರಣ್‌ಬೀರ್ ಕಪೂರ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ್ರೆ, ರಶ್ಮಿಕಾ ಮಂದಣ್ಣ ಪಾತ್ರ ಮತ್ತಷ್ಟು ಹೈಲೆಟ್ ಆಗಲಿದೆ. ಇದರಲ್ಲಿ ಸೇಡಿನ ಕಥೆ, ಲವ್ ಮತ್ತು ರೊಮ್ಯಾನ್ಸ್ ತುಸು ಜಾಸ್ತಿಯೇ ಇರಲಿದೆ. ಫ್ಯಾನ್ಸ್‌ಗೆ ಒಂದು ವಿಭಿನ್ನ ಕಥೆಯನ್ನು ಸಂದೀಪ್ ತೋರಿಸೋದು ಗ್ಯಾರಂಟಿ. ಇದನ್ನೂ ಓದಿ:ನಾನು ಮದುವೆಯಾಗಬೇಕು, ಮಕ್ಕಳು ಬೇಕು ಎಂದ ವಿಜಯ್ ದೇವರಕೊಂಡ
ಸದ್ಯ ರಾಮಾಯಣ ಪಾರ್ಟ್ 1 & 2 ಆದ್ಮೇಲೆ 2026ರಲ್ಲಿ ಅನಿಮಲ್ ತಂಡವನ್ನು ರಣ್‌ಬೀರ್ ಸೇರಿಕೊಳ್ಳಲಿದ್ದಾರೆ. ರಶ್ಮಿಕಾ ಈಗಾಗಲೇ 5ಕ್ಕೂ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಇದಾದ ನಂತರ ಅನಿಮಲ್ 2ಗೆ ಸಾಥ್ ನೀಡಲಿದ್ದಾರೆ. ಒಟ್ನಲ್ಲಿ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.