ಚಿತ್ರರಂಗದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ವಿಜಯ್ ದೇವರಕೊಂಡ(Vijay Devarakonda) ಜೊತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. `ಲೈಗರ್’ ಸೋಲಿನ ಬೆನ್ನಲ್ಲೇ ವಿಜಯ್ ಮತ್ತು ರಶ್ಮಿಕಾ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಮಾಲ್ಡೀವ್ಸ್ನಲ್ಲಿರುವ ತನ್ನ ಸೆಲ್ಫಿ ಫೋಟೋವನ್ನ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಬಣ್ಣದ ಲೋಕದಲ್ಲಿ ರಶ್ಮಿಕಾ ಮಂದಣ್ಣ(Rashmika Mandanna) ಅದೃಷ್ಟದ ನಟಿಯಾಗಿ ಹೊರಹೊಮ್ಮಿದ್ದಾರೆ. ಆಕೆ ಏನೇ ಮಾಡಿದ್ದರು ಸದಾ ಸುದ್ದಿಯಲ್ಲಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಮಾಲ್ಡೀವ್ಸ್ಗೆ ಹೋಗಿದ್ದಾರೆ. `ಲೈಗರ್'(Liger Film) ಸೋಲಿನಿಂದ ಹತಾಶನಾಗಿರುವ ವಿಜಯ್ ರಶ್ಮಿಕಾ ಜೊತೆಯಾಗಿದ್ದಾರೆ. ಈಗ ಕೊಡಗಿನ ಬ್ಯೂಟಿ ರಶ್ಮಿಕಾ ಶೇರ್ ಮಾಡಿರುವ ಫೋಟೋ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದೆ.
ಮಾಲ್ಡೀವ್ಸ್ಗೆ ಚೆಂದದ ಜಾಗದಲ್ಲಿ ಕುಳಿತು ತಮ್ಮ ಸೆಲ್ಫಿ ಫೋಟೋವನ್ನ ರಶ್ಮಿಕಾ ಶೇರ್ ಮಾಡಿದ್ದಾರೆ. ನಟಿಯ ಫೋಟೋಗೆ ಸಾಕಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು `ನೀವೊಬ್ಬರೇ ಇಲ್ಲಾ ಎಂಬ ವಿಚಾರ ನಮಗೆ ಗೊತ್ತು’ ಕಾಮೆಂಟ್ ಮಾಡಿದ್ದಾರೆ. ಈ ಮೂಲಕ ವಿಜಯ್ ನಿಮ್ಮ ಒಟ್ಟಿಗೆ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಆಸ್ಪತ್ರೆಯಿಂದ ಡಿಸ್ಚಾರ್ಜ್: ಪತಿ ಜೊತೆ ದಿವ್ಯಾ ಶ್ರೀಧರ್ ಡಿಶುಂ ಡಿಶುಂ ವಿಡಿಯೋ
ಇನ್ನೂ `ಗುಡ್ ಬೈ’ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ವಿಜಯ್ ಜೊತೆ ಮುಂಬೈಯಿಂದ ಮಾಲ್ಡೀವ್ಸ್ಗೆ ಹೋಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.