ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ತಮ್ಮದೇ ಸ್ಟೈಲಿನಲ್ಲಿ ಸೆಲ್ಫಿಗೆ ಪೋಸ್ ಕೊಟ್ಟಿರುವ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಸೋನಲ್ ಜೊತೆಗಿನ ಮದುವೆ ಸುದ್ದಿ ನಿಜ ಎಂದ ‘ಕಾಟೇರ’ ಡೈರೆಕ್ಟರ್
ಕ್ಯಾಮೆರಾ ಎಲ್ಲೇ ಕಂಡರೂ ರಶ್ಮಿಕಾ ಆಗಾಗ ಕೈಯಲ್ಲಿ ಸನ್ನೆ ಮಾಡುತ್ತಾ ಬಗೆ ಬಗೆಯ ಪೋಸ್ ಕೊಡುತ್ತಲೇ ಇರುತ್ತಾರೆ. ಈಗ ಸ್ಟೈಲ್ ಆಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ನನ್ನ ಆತ್ಮೀಯರೇ, ನಾನು ಯಾವಾಗಲೂ ನನ್ನ ಸೆಲ್ಫಿಗಳನ್ನು ಪೋಸ್ಟ್ ಮಾಡಲು ನಾಚಿಕೆಪಡುತ್ತೇನೆ. ಇದು ನಿಮಗಾಗಿ, ಹೆಚ್ಚು ಸೆಲ್ಫಿಗಳನ್ನು ಪೋಸ್ಟ್ ಮಾಡುವುದರಿಂದ ನಾನು ಆರಾಮಯಾಗಿರುತ್ತೇನೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಅಂದಹಾಗೆ, ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಾಂಭರ’ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ರಶ್ಮಿಕಾಗೆ ಚಾನ್ಸ್ ಸಿಕ್ಕಿದೆ. ಸ್ಪೆಷಲ್ ರೋಲ್ ಆಗಿದ್ರೂ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ತಿರುವು ಕೊಡಲಿದೆಯಂತೆ. ನಟಿಗೂ ಕೂಡ ಇಷ್ಟವಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನೂ ಪುಷ್ಪ 2, ಅನಿಮಲ್ 2, ಕುಬೇರ, ಚಾವಾ, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.