ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ರಣ್‌ಬೀರ್‌ಗೆ (Ranbir Kapoor) ಲಿಪ್‌ಲಾಕ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಈಗ ಬೋಲ್ಡ್ ಫೋಟೋ ಶೇರ್ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.
ಇದೀಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದಿನ ಕಥೆ ಏನೆಂದರೆ ಇದು ಸುಮಾರು ಒಂದು ವರ್ಷದ ಹಿಂದೆ ತೆಗೆದಿರೋ ಫೋಟೋ. ಆದರೆ ನಿಮಗಾಗಿ ಈ ಚಿತ್ರವನ್ನು ಪೋಸ್ಟ್ ಮಾಡಿಕೊಂಡಿದ್ದೇನೆ ಎಂದು ನಟಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಹಾಟ್ ಆಗಿ ಕಾಣುತ್ತಿದ್ದಾರಾ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಯಶ್‌ಗೂ ಮುನ್ನ ಹೊಸ ಸಿನಿಮಾ ಅನೌನ್ಸ್ ಮಾಡಿದ ಶ್ರೀನಿಧಿ ಶೆಟ್ಟಿ
View this post on Instagram
‘ಕಿರಿಕ್ ಪಾರ್ಟಿ’ ಮೂಲಕ ಸಿನಿ ಪಯಣ ಶುರು ಮಾಡಿದ್ದ ನಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಸೀನಿಯರ್ ಹೀರೋಯಿನ್ಸ್‌ಗೆ ಠಕ್ಕರ್ ಕೊಡುತ್ತಿದ್ದಾರೆ.
ಇತ್ತೀಚೆಗೆ ಅನಿಮಲ್ (Animal) ಸಿನಿಮಾದ ಸಾಂಗ್‌ವೊಂದು ರಿಲೀಸ್ ಆಗಿತ್ತು. ರಣ್‌ಬೀರ್ ಜೊತೆಗಿನ ರಶ್ಮಿಕಾ ಲಿಪ್‌ಲಾಸ್ ಸೆನ್ಸೇಷನ್ ಕ್ರಿಯೇಟ್ ಮಾಡೋದರ ಜೊತೆಗೆ ಸಖತ್ ವೈರಲ್ ಆಗಿದ್ದರು.
ರಣ್‌ಬೀರ್ ಜೊತೆಗಿನ `ಅನಿಮಲ್’ ಚಿತ್ರ ಡಿಸೆಂಬರ್ 1ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಾರಾ? ಕಾದುನೋಡಬೇಕಿದೆ.