ಬೆಂಗಳೂರು: ಕಿರಿಕ್ ಬೆಡಗಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈಗ ನನ್ನ ಕಣ್ಣಲ್ಲಿ ಜಾದೂ ಇದೆ ಎನ್ನುತ್ತಾ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ.
ರಶ್ಮಿಕಾ ತಮ್ಮ ಈ ಲೆಟೆಸ್ಟ್ ಫೋಟೋ ಶೇರ್ ಮಾಡಿದ್ದು, ನನ್ನ ಕಣ್ಣಲ್ಲಿ ಜಾದೂ ಇದೆ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ತಮ್ಮ ಕೈಯಲ್ಲಿರುವ ಟ್ಯಾಟೂವನ್ನು ಪ್ರದರ್ಶಿಸಿದ್ದಾರೆ. ರಶ್ಮಿಕಾರ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಈ ಲುಕ್ ಕಂಡು ಲೈಕ್ಸ್ ಜೊತೆ ಕಮೆಂಟ್ ಸಹ ಮಾಡುತ್ತಿದ್ದಾರೆ. ಇದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್
View this post on Instagram
ಸೌತ್ ಬ್ಯೂಟಿ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಫೇಮಸ್ ಆಗಿದ್ದಾರೆ. ಬಾಲಿವುಡ್ ಸಿನಿಮಾ, ಜಾಹೀರಾತಗಳಲ್ಲಿ ಮಿಂಚಲಾರಂಭಿಸಿದ್ದಾರೆ. ಜೊತೆಗೆ ಹೊಸ ಹಿಂದಿ ಸಿನಿಮಾ ಸಹ ರಶ್ಮಿಕಾ ಕೈ ಸೇರಿವೆ. ಇದೋಗ ಈ ನಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋ ಹಂಚಿಕೊಳ್ಳುವುದ ಜೊತೆಗೆ ನನ್ನ ಕಣ್ಣಲ್ಲಿ ಜಾದು ಇದೆ ಎನ್ನುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಶ್ಮಿಕಾ ಅಭಿಮಾನಿಗಳಿಗೆ ತಮ್ಮ ಲೇಟೆಸ್ಟ್ ಫೋಟೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಈಗಲೂ ಸಹ ಅವರ ಈ ಹಾಟ್ ಫೋಟೋ ನೆಟ್ಟಿಗರ ನಿದ್ದೆಗೆಡಿಸಿದೆ.