ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಪುಷ್ಪ 2’ನಲ್ಲಿ (Pushpa 2) ಇರ್ತಾರಾ, ಇಲ್ಲವಾ.. ಅವರ ದೃಶ್ಯಗಳು ಕಟ್ ಆಗಿವೆಯೂ, ಇನ್ನೂ ಉಳಿಸಿಕೊಂಡಿದ್ದಾರಾ ಹೀಗೆಲ್ಲ ಪ್ರಶ್ನೆಗಳು ತೆಲುಗು ಚಿತ್ರರಂಗದಲ್ಲಿ ಗಿರಕಿ ಹೊಡೆಯುತ್ತಿದ್ದವು. ರಶ್ಮಿಕಾ ಮಂದಣ್ಣ(Rashmika Mandanna) ಪಾತ್ರವನ್ನು ಕಟ್ ಮಾಡಿ, ಬೇರೆ ನಟಿಗೆ ಹಂಚಲಾಗಿದೆ ಎಂದೆಲ್ಲ ಸುದ್ದಿಯಿತ್ತು. ಎಲ್ಲ ಸುದ್ದಿಗೂ ಗೋಲಿ ಹೊಡೆದಿದ್ದಾರೆ ರಶ್ಮಿಕಾ.
ನಿನ್ನೆಯಿಂದ ಪುಷ್ಪ 2 ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಾತ್ರಿ ವೇಳೆ ನಡೆಯುತ್ತಿರುವ ಚಿತ್ರೀಕರಣದಲ್ಲಿ (Shooting) ಭಾಗಿಯಾಗುವುದು ಒಂದು ಥ್ರಿಲ್ ಅನುಭವ ಅಂತಾನೂ ಅವರು ಹೇಳಿದ್ದಾರೆ. ಅಲ್ಲಿಗೆ ರಶ್ಮಿಕಾ ಮತ್ತೆ ಪುಷ್ಪ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದಾಗಿ ಖಚಿತ ಪಡಿಸಿದ್ದಾರೆ.
ಪುಷ್ಪ 2 ಸಿನಿಮಾದ ಈ ಹಂತದ ಶೂಟಿಂಗ್ ತಿರುಪತಿ ಸಮೀಪದ ಶೇಷಾಚಲಂನಲ್ಲಿ (Seshachalam) ನಡೆಯುತ್ತಿದೆ. ಅದಕ್ಕಾಗಿ ನೈಟ್ ಶೂಟ್ ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ. ಈ ಹಂತದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್ (Allu Arjun), ರಶ್ಮಿಕಾ ಮಂದಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಿನ್ನೆಯಿಂದ ಶೂಟಿಂಗ್ ನಡೆದಿದೆ.
ಮೊನ್ನೆಯಷ್ಟೇ ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ (Animal) ಸಿನಿಮಾದ ಶೂಟಿಂಗ್ ಮುಗಿಸಿರುವುದಾಗಿ ರಶ್ಮಿಕಾ ಹೇಳಿಕೊಂಡಿದ್ದರು. ರಣಬೀರ್ ಕಪೂರ್ (Ranbir Kapoor) ನಾಯಕ. ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ಮೇಲೆ ನಿರೀಕ್ಷೆ ಇದೆ. ಅದಕ್ಕೆ ರಶ್ಮಿಕಾ ಕುಲುಕುಲು ನಗುತ್ತಿದ್ದಾರೆ. ಈ ಸಿನಿಮಾದ ಮೇಲೆ ರಶ್ಮಿಕಾಗೆ ಸಾಕಷ್ಟು ಭರವಸೆ ಇದೆ. ಇದನ್ನೂ ಓದಿ:ಹಾಲಿವುಡ್ ಸಂದರ್ಶನದಲ್ಲಿ ಆಲಿಯಾ ಭಟ್ ಹೀಗಾ ಮಾಡೋದು- ರಣ್‌ಬೀರ್ ಪತ್ನಿ ಟ್ರೋಲ್
ಅನಿಮಲ್ ಮುಗಿಯಿತು. ಅದ್ಭುತ ಪಾತ್ರ. ಈ ರೂಪದಲ್ಲಿ ನನ್ನನ್ನು ಯಾರೂ ನೋಡಿಲ್ಲ. ನಿರ್ದೇಶಕ ಸಂದೀಪ್ (Sandeep) ವಂಡರ್‌ಫುಲ್. ರಣಬೀರ್ ಬಗ್ಗೆ ಏನು ಹೇಳಬೇಕು ? ಅಮೇಜಿಂಗ್ ಆಕ್ಟರ್. ಅಷ್ಟೇ ಒಳ್ಳೆಯ ಮನಸಿನ ಹುಡುಗ. ಅನಿಮಲ್ ನಿಮ್ಮನ್ನು ಖಂಡಿತ ರಂಜಿಸಲಿದೆ ಎನ್ನುತ್ತಾರೆ ರಶ್ಮಿಕಾ ಮಂದಣ್ಣ.
ಇದೊಂದು ಸಿನಿಮಾದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ರಶ್ಮಿಕಾ. ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ನಟಿಸುವುದು ಮಾಮೂಲಿ. ಆದರೆ ಅಲ್ಲಿ ಗೆದ್ದು ಬೀಗುವುದು, ಸೆಡ್ಡು ಹೊಡೆದು ಹೈವೇ ನಿರ್ಮಿಸಿಕೊಳ್ಳೋದು ಸುಲಭ ಅಲ್ಲ.ರಶ್ಮಿಕಾಗೆ ಈಗಾಗಲೇ ಎರಡು ಸೋಲು ಅದನ್ನು ತೋರಿಸಿದೆ. ಈ ಬಾರಿ ಅನಿಮಲ್ ಕೈ ಹಿಡಿಯಬೇಕು. ಇಲ್ಲದಿದ್ದರೆ ಇನ್ನಷ್ಟು ಸೈಕಲ್ ತುಳಿಯಬೇಕು.
Web Stories