ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಹುಭಾಷೆಗಳಲ್ಲಿ ಮಿಂಚುತ್ತಿದ್ದು, ಇವರು ಮಾಡಿದ ಆಲ್ಮೂಸ್ಟ್ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿವೆ. ಅಭಿಮಾನಿಗಳು ರಶ್ಮಿಕಾ ಅವರನ್ನು ಲಕ್ಕಿ ಸ್ಟಾರ್ ಎಂದು ಕರೆಯುತ್ತಿದ್ದಾರೆ. ಈಗ ರಶ್ಮಿಕಾ ಬಾಲಿವುಡ್ನಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಅವರ ಎರಡು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಈ ನಡುವೆಯೇ ಮೆಗಾ ಪ್ರಾಜೆಕ್ಟ್ಗೆ ಈ ತಾರೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ.
ರಶ್ಮಿಕಾ ಬಾಲಿವುಡ್ ‘ಮಿಷನ್ ಮಜ್ನು’ ಶೂಟಿಂಗ್ ಪೂರ್ತಿ ಮುಗಿದಿದ್ದು, ರಿಲೀಸ್ಗೆ ರೆಡಿ ಇದೆ. ಬಾಲಿವುಡ್ಗೆ 2ನೇ ಸಿನಿಮಾ ‘ಗುಡ್ ಬೈ’ ಕೂಡ ಶೂಟಿಂಗ್ ಮುಗಿದು, ಇನ್ನಷ್ಟೇ ಅದು ತೆರೆಗೆ ಬರಬೇಕಿದೆ. ಈ ವೇಳೆಯೇ ‘ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ನಲ್ಲಿ ‘ಅನಿಮಲ್’ ಸಿನಿಮಾ ಮೂಡಿಬರಲಿದ್ದು ಈ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಈ ಸಿನಿಮಾಗೆ ಮೊದಲು ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ನಾಯಕಿ ಎಂಬ ಸುದ್ದಿಯಿತ್ತು. ಆದರೆ ಅವರು ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ಮಾಹಿತಿಯಿದೆ. ಆ ಪಾತ್ರವನ್ನು ರಶ್ಮಿಕಾ ನಿರ್ವಹಿಸುತ್ತಾರಂತೆ. ಈ ಸಿನಿಮಾಗೆ ಇವರೇ ಹೀರೋಯಿನ್ ಎಂದು ಅಧಿಕೃತವಾಗಿ ಘೋಷಣೆಯಾದರೆ ರಣಬೀರ್ ಅವರಿಗೆ ರಶ್ಮಿಕಾ ಪತ್ನಿಯಾಗಿ ನಟಿಸಲಿದ್ದಾರೆ. ಈ ಸುದ್ದಿ ರಶ್ಮಿಕಾ ಅಭಿಮಾನಿಗಳಿಗೆ ಫುಲ್ ಟ್ರೀಟ್ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ರಶ್ಮಿಕಾಗೆ ಹಿಂದಿಯ ದೊಡ್ಡ ಬ್ಯಾನರ್ ಆದ ಕರಣ್ ಜೋಹರ್ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಇತ್ತೀಚೆಗಷ್ಟೇ ರಶ್ಮಿಕಾ ಅವರು ಕರಣ್ ಜೋಹರ್ ಆಫೀಸ್ಗೆ ಭೇಟಿ ಕೊಟ್ಟಿದ್ದು, ಬಾಲಿವುಡ್ ಸ್ಟಾರ್ ನಟರ ಜೊತೆ ಈ ನಟಿ ತೆರೆಹಂಚಿಕೊಳ್ಳುತ್ತಾರೆ ಎಂಬ ಸುದ್ದಿಯೂ ಇದೆ. ತಮಿಳು, ತೆಲುಗಿನಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ಕನ್ನಡದ ಹುಡುಗಿ ಮಿಂಚುತ್ತಿದ್ದಾರೆ. ಇದನ್ನೂ ಓದಿ: ಡಿಂಪಲ್ ಕ್ವೀನ್ಗೆ ಮೋಹಕತಾರೆಯ ಮೆಚ್ಚುಗೆ ಕಾಮೆಂಟ್ – ಅಭಿಮಾನಿಗಳು ಖುಷ್