CinemaKarnatakaLatestMain PostSandalwoodSouth cinema

ಭಾರತದ ಟಾಪ್ 10 ನಾಯಕಿಯರಲ್ಲಿ ರಶ್ಮಿಕಾ ಮಂದಣ್ಣಗೂ ಸ್ಥಾನ: ಕನ್ನಡದಿಂದಲ್ಲ ಅನ್ನುವುದೇ ಬೇಸರ

ಗಾಗಲೇ ಭಾರತದ ಟಾಪ್ (Top) 10 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಆರ್ಮ್ಯಾಕ್ಸ್ ಸಂಸ್ಥೆ ಭಾರತದ ಟಾಪ್ 10 ನಟಿಯರ ಪಟ್ಟಿಯನ್ನೂ ರಿಲೀಸ್ ಮಾಡಿದೆ. ನಂಬರ್ ಒನ್ ನಾಯಕಿಯಾಗಿ ಸಮಂತಾ (Samantha) ಹೊರಹೊಮ್ಮಿದ್ದಾರೆ. ಬಾಲಿವುಡ್ ತಾರೆಯರನ್ನೂ ಅವರು ಹಿಂದಿಕ್ಕೆ ಈ ಸ್ಥಾನವನ್ನು ಪಡೆದುಕೊಂಡಿದ್ದು ವಿಶೇಷ. ಈ ಬಾರಿ ಇಬ್ಬರು ಬಾಲಿವುಡ್ ಕಲಾವಿದರು ಮಾತ್ರ ಟಾಪ್ ಟೆನ್‍ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದಕ್ಷಿಣದ ಕಲಾವಿದರೇ ಹೆಚ್ಚಿನ ಸ್ಥಾನ ಪಡೆದಿದ್ದಾರೆ.

ಪ್ರತಿ ಸಲವೂ ಟಾಪ್ ಟೆನ್ ಪಟ್ಟಿಯಲ್ಲಿ ಬಹುತೇಕ ಬಾಲಿವುಡ್ (Bollywood) ನಟಿಯರೇ ಕಾಣಿಸಿಕೊಳ್ಳುತ್ತಿದ್ದರು. ಜೊತೆಗೆ ದಕ್ಷಿಣದ ಸಿನಿಮಾ ರಂಗ ಅಂದಾಕ್ಷಣ, ತಮಿಳು ಮತ್ತು ತೆಲುಗಿನ ನಟಿಯರೂ ಅದರಲ್ಲಿರುತ್ತಿದ್ದರು. ಕನ್ನಡದ ನಟಿ ಅಂದರೆ, ನೇರವಾಗಿ ಕನ್ನಡ ಸಿನಿಮಾದ ನಟನೆಗಾಗಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಒಬ್ಬರೇ ಒಬ್ಬರು ನಟಿಯರು ಈವರೆಗೂ ಕಾಣಿಸಿಕೊಂಡಿಲ್ಲ ಎನ್ನುವುದು ವಿಷಾದನೀಯ. ಈ ಬಾರಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪಟ್ಟಿಯಲ್ಲಿದ್ದರು. ಅದೂ ಕನ್ನಡ ಸಿನಿಮಾರಂಗದಿಂದ ಮಾಡಿ ಆಯ್ಕೆ ಅಲ್ಲ ಎನ್ನುವುದು ನೋವಿನ ಸಂಗತಿ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

ಭಾತರದ ಟಾಪ್ 10 ನಟಿಯರಲ್ಲಿ ರಶ್ಮಿಕಾ ಮಂದಣ್ಣಗೆ ಟಾಪ್ 6 ಸ್ಥಾನ ದೊರೆತಿದೆ. ಆಲಿಯಾ ಭಟ್ ಎರಡನೇ ಸ್ಥಾನ ಪಡೆದರೆ, ಮೂರನೇ ಸ್ಥಾನ ನಯನತಾರಾ, ನಾಲ್ಕನೇ ಸ್ಥಾನ ಕಾಜಲ್ ಅಗರ್ವಾಲಾ, ಐದನೇ ಸ್ಥಾನ ದೀಪಿಕಾ ಪಡುಕೋಣೆ (Deepika Padukone) ಪಾಲಾಗಿದೆ. ಕೀರ್ತಿ ಸುರೇಶ್ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರೆ, ಎಂಟನೇ ಸ್ಥಾನದಲ್ಲಿ ಕತ್ರಿನಾ ಕೈಫ್ (Katrina Kaif)ಇದ್ದಾರೆ 9ನೇ ಸ್ಥಾನದಲ್ಲಿ ಪೂಜಾ ಹೆಗಡೆ ಮತ್ತು 10ನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ ಅವರ ಹೆಸರಿದೆ.

Live Tv

Leave a Reply

Your email address will not be published.

Back to top button