ಇದು ರಶ್ಮಿಕಾ ಮಂದಣ್ಣನಾ (Rashmika Mandanna) ಎಂದು ಅನುಮಾನ ಪಡುವಷ್ಟು ನಟಿ ರಶ್ಮಿಕಾ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಾಹಿನಿಯೊಂದರ ಪ್ರಶಸ್ತಿ (Award) ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಅವರು ಶಾರ್ಟ್ ಡ್ರೆಸ್ ನಲ್ಲಿ (Short Dress) ಬಂದಿದ್ದು, ಕೆಲವರು ಬ್ಯೂಟಿಫುಲ್ ಡಾಲ್ ಎಂದು ಪ್ರಶಂಸೆ ವ್ಯಕ್ತ ಪಡಿಸಿದರೆ, ಟ್ರೋಲಿಗರು ಮಾತ್ರ ಕಾಲೆಳೆದಿದ್ದಾರೆ. ಬಾಲಿವುಡ್ ನಟಿ ಉರ್ಫಿ ಜಾವೇದ್ ಗೆ ಇನ್ನೂ ಕೆಲವರು ಹೋಲಿಸಿದ್ದಾರೆ.
ವಾಹಿನಿಯೊಂದರ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅದಾಗಿದ್ದರಿಂದ ಬಹುತೇಕ ನಟಿಯರು ಈ ರೀತಿ ಕಾಸ್ಟ್ಯೂಮ್ ಗಳಲ್ಲಿ ಬರುವುದು ವಾಡಿಕೆ. ಈ ಕಾರ್ಯಕ್ರಮಕ್ಕಾಗಿಯೇ ವಿವಿಧ ವಿನ್ಯಾಸದ ಕಾಸ್ಟ್ಯೂಮ್ ಗಳನ್ನು ರೆಡಿ ಮಾಡಿಸಲಾಗತ್ತೆ. ಇನ್ನೂ ಕೆಲವರಿಗೆ ಫ್ಯಾಷನ್ ಡಿಸೈನರ್ ಕಂಪೆನಿಗಳು ಸ್ಪಾನ್ಸರ್ ಮಾಡುತ್ತವೆ. ಹಾಗಾಗಿ ಸದಾ ನಟಿಯರು ಇಂತಹ ಸಮಾರಂಭದಲ್ಲಿ ಹಾಟ್ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ
ರಶ್ಮಿಕಾ ಮಂದಣ್ಣ ಕೂಡ ತುಂಡುಡುಗೆಯಲ್ಲಿ ಬಂದು, ಕ್ಯಾಮೆರಾಗಳ ಗಮನ ಸೆಳೆದಿದ್ದಾರೆ. ನಿಜಕ್ಕೂ ಈಕೆ ರಶ್ಮಿಕಾ ಮಂದಣ್ಣನಾ ಎಂದು ಅಚ್ಚರಿ ಪಡುವಷ್ಟರ ಮಟ್ಟಿಗೆ ರಶ್ಮಿಕಾ ಶಾರ್ಟ್ ತೊಟ್ಟಿದ್ದರು. ರಶ್ಮಿಕಾ ವೇದಿಕೆಯತ್ತ ಎಂಟ್ರಿ ಕೊಡುತ್ತಿದ್ದರೆ, ಎಲ್ಲ ಕ್ಯಾಮೆರಾಗಳು ಅವರತ್ತ ತಿರುಗಿ ಒಂದರ ಮೇಲೊಂದು ಫೋಟೋ ಕ್ಲಿಕ್ಕಿಸಿವೆ. ನಗುನಗುತ್ತಲೇ ಎಲ್ಲರಿಗೂ ಫೋಸ್ ಕೂಡ ನೀಡಿದ್ದಾರೆ ರಶ್ಮಿಕಾ.