Connect with us

Bengaluru City

ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

Published

on

– ವೆಬ್ ಸಿರೀಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು
– ಸಂಭಾವನೆ ಬಗ್ಗೆ ಕೇಳಲಾದ ಪ್ರಶ್ನೆಗೆ ಕಿರಿಕ್ ನಟಿಯ ಉತ್ತರ

ಬೆಂಗಳೂರು: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದರೆ ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಾರೆ ಎನ್ನಲಾಗುವ ರಶ್ಮಿಕಾ, “ನನ್ನ ಬ್ಯಾಂಕ್ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಗುರು” ಎಂದಿದ್ದಾರೆ.

ಯೂಟ್ಯೂಬ್ ಚಾನೆಲಿಗೆ ನೀಡಿದ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಈ ರೀತಿ ಕೇಳಿದ್ದಾರೆ. ನಿರೂಪಕ, “ನೀವು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅಲ್ವಾ” ಎಂದು ಪ್ರಶ್ನೆ ಕೇಳಿದ್ದಾರೆ. ಆಗ ರಶ್ಮಿಕಾ, “ಇದೆಲ್ಲ ಸುಳ್ಳು, ನನ್ನ ಬ್ಯಾಂಕ್ ಆಕೌಂಟ್‍ನಲ್ಲಿ ದುಡ್ಡೇ ಇಲ್ಲ. ನನ್ನ ಅಕೌಂಟ್ ಖಾಲಿ ಇದೆ, ಇದೆಲ್ಲಾ ಗಾಸಿಪ್ ಅಷ್ಟೇ” ಎಂದಿದ್ದರು. ರಶ್ಮಿಕಾ ಅವರ ಕಾರ್ಯಕ್ರಮದ ವಿಡಿಯೋ ಜ.11 ರಂದು ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿತ್ತು. ಈ ವಿಡಿಯೋ ಅಪ್ಲೋಡ್ ಆದ 5 ದಿನದಲ್ಲೇ ಐಟಿ ಅಧಿಕಾರಿಗಳು ರಶ್ಮಿಕಾ ಮನೆಯ ಮೇಲೆ ದಾಳಿ ಮಾಡಿದ್ದಾರೆ.

ಸಿನಿಮಾದಿಂದ ದುಡ್ಡು ಬರುವುದಿಲ್ಲ ಎಂದು ಕಿರಿಕ್ ಹುಡುಗಿ ಹೇಳಿದ್ದಾರೆ. ಬೇರೆಯವರು ನನ್ನ ಬಗ್ಗೆ ವಿವಾದ ಮಾಡಿ ಯೂಟ್ಯೂಬ್‍ನಲ್ಲಿ ದುಡ್ಡು ಮಾಡುತ್ತಾರೆ. ಅದಕ್ಕೆ ನಾನು ಯೂಟ್ಯೂಬ್ ಚಾನೆಲ್ ಮಾಡಿ ಅದರಲ್ಲಿ ವಿವಾದಾತ್ಮಕ ಮಾತು ಹಾಕಿ ದುಡ್ಡು ಮಾಡೋಣ ಎಂದು ವೆಬ್ ಸಿರಿಸ್ ನ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ತಮಾಷೆಯಾಗಿ ಹೇಳಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾವಿದ್ದರೂ ಬ್ಯಾಂಕ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ ರಶ್ಮಿಕಾ ಮಂದಣ್ಣಗೆ ಈಗ ಐಟಿ ಶಾಕ್ ಕೊಟ್ಟಿದೆ.

“ಯಾರೇ ಕೆಲಸ ಮಾಡಿದರೂ ಪ್ರಮೋಷನ್ ಬೇಕಾಗುತ್ತದೆ. ನಾನು ಫ್ರೀಯಾಗಿ ಸಿನಿಮಾ ಮಾಡಲೇ? ನಿದ್ದೆ, ಊಟ ಇಲ್ಲದೆ ಕಷ್ಟ ಪಡುತ್ತಿದ್ದೇನೆ. ಎಲ್ಲಾ ತಯಾರಿ ಮಾಡಿಕೊಂಡಿದ್ದೇನೆ. ಹೀಗಾಗಿ ಸಂಭಾವನೆ ಹೆಚ್ಚು ಮಾಡಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದ್ದರು. 2017ರಲ್ಲಿ ಮೊದಲ ಸಿನಿಮಾ ಮಾಡಿದೆ, ಅಲ್ಲಿಂದ ನಾನು ಕೂಡ ಬೆಳೆಯಬೇಕಲ್ಲವೆ ಎಂದಿದ್ದರು.

 

ಐಟಿ ದಾಳಿ ಮಾಡಿದ್ದೇಕೆ?
ಮೊದಲನೆಯದು ರಶ್ಮಿಕಾ ಕುಟುಂಬ ಇತ್ತೀಚೆಗೆ ವಿರಾಜಪೇಟೆ ಗೋಣಿಕೊಪ್ಪದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಸಿಯಲ್ ಸ್ಕೂಲ್ ಪ್ರಾರಂಭ ಮಾಡುವ ಉದ್ದೇಶ ಹೊಂದಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ವಿರಾಜಪೇಟೆ ಸುತ್ತಮುತ್ತ ಸುಮಾರು 50 ಎಕರೆಯಷ್ಟು ಕಾಫಿ ತೋಟ ಖರೀದಿಯ ಬಗ್ಗೆಯೂ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಲವು ವ್ಯವಹಾರಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

ಮೂರು ತಿಂಗಳ ಹಿಂದೆ ಕೋಟ್ಯಂತರ ಬೆಲೆ ಬಾಳುವ ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಭೂಮಿ ಖರೀದಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಷ್ಟೆ ಅಲ್ಲದೇ ನಗದು ರೂಪದಲ್ಲಿ ಸಂಭಾವನೆ ಪಡೆದಿರುವ ಕಾರಣ ತೆರಿಗೆ ಪಾವತಿಸಿಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಮಾಹಿತಿಯ ಆಧಾರದ ಮೇರೆಗೆ ಐಟಿ ಅಧಿಕಾರಿಗಳು ರಶ್ಮಿಕಾ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Click to comment

Leave a Reply

Your email address will not be published. Required fields are marked *