ಬೆಂಗಳೂರು: ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಗೋವಾದಲ್ಲಿ ಹೊಸ ನಿವಾಸವನ್ನು ಖರೀದಿಸಿರುವ ವಿಚಾರವನ್ನು ಹಂಚಿಕೊಳ್ಳುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಣ್ಣಾಥೆ ಚಿತ್ರತಂಡದಿಂದ ಎಸ್‍ಪಿಬಿ ಅಭಿಮಾನಿಗಳಿಗೆ ಸಿಹಿಸುದ್ದಿ
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ಬಾಲಿವುಡ್‍ನ ಸಾಲು, ಸಾಲು ಸಿನಿಮಾಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಇದೀಗ ರಶ್ಮಿಕಾ ಕೈಯಲ್ಲಿ ಹಲವಾರು ಬಿಗ್ ಬಜೆಟ್ ಸಿನಿಮಾದ ಪ್ರಾಜೆಕ್ಟ್‌ಗಳಿದ್ದು, ಹಲವಾರು ಸ್ಟಾರ್ ನಟರಿಗೆ ಜೋಡಿಯಾಗಿ ತೆರೆ ಮೇಲೆ ಮಿಂಚುತ್ತಿದ್ದಾರೆ.
Advertisement
Advertisement
ಈ ಮಧ್ಯೆ ರಶ್ಮಿಕಾ ಪ್ರಕೃತಿ ಸೌಂದರ್ಯದ ನಡುವೆ ಗೋವಾದಲ್ಲಿ ಮನೆಯನ್ನು ಖರೀದಿಸಿದ್ದು, ಅದರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಫೋಟೋದಲ್ಲಿ ನಿವಾಸದ ಹೊರಾಂಗಣ ಇರುವ ಈಜುಕೊಳ ಪಕ್ಕದಲ್ಲಿ ಬುದ್ಧನ ಮೂರ್ತಿ ಹಾಗೂ ಬೃಹತ್ ಮರ ಇರುವುದನ್ನು ಕಾಣಬಹುದಾಗಿದೆ. ಇಷ್ಟೇ ಅಲ್ಲದೇ ಫೋಟೋ ಜೊತೆಗೆ ರಶ್ಮಿಕಾ ಮಂದಣ್ಣ ಗೋವಾದಲ್ಲಿ ನಿಮ್ಮ ಹೊಸ ಮನೆ ಖರೀದಿಸಿದಾಗ.. ಹೊಟ್ಟೆ ಕಿಚ್ಚಾಯ್ತಾ? ಎಂದು ಪ್ರಶ್ನಿಸುವ ಮೂಲಕ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ನೀಡುವ ಚಿಕ್ಕಿಯಲ್ಲಿ ಕಳಪೆ ಗುಣಮಟ್ಟ – ತನಿಖೆಗೆ ರೇವಣ್ಣ ಆಗ್ರಹ
Advertisement
Advertisement
ಸದ್ಯ ರಶ್ಮಿಕಾ ಗೋವಾದಲ್ಲಿ ಮನೆ ಖರೀದಿಸಿರುವ ಬಗ್ಗೆ ಹಲವರಿಎ ಕೂತೂಹಲ ಮೂಡಿದ್ದು, ಮೇಲಿಂದ ಮೇಲೆ ಮನೆ ಖರೀದಿಸುತ್ತಿರುವ ರಶ್ಮಿಕಾಗೆ ಹಣ ಎಲ್ಲಿಂದ ಬರುತ್ತಿದೆ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಫ್ಲಾಟ್‍ವೊಂದನ್ನು ಖರೀದಿಸಿದರು. ಅಲ್ಲದೇ ತೆಲುಗು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಮಂದಣ್ಣ ಹೈದರಾಬಾದ್‍ನಲ್ಲಿ ಕೂಡ ಮನೆ ಹೊಂದಿದ್ದಾರೆ. ಜೊತೆಗೆ ರಶ್ಮಿಕಾ ಮಂದಣ್ಣ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.