ಕನ್ನಡದ ಹೆಸರಾಂತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು. ಎದೆಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂದು ಗೊತ್ತಾಗಿದೆ. ಅಭಿಷೇಕ್ (Abhishek) ಅನ್ನುವವರು ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
Advertisement
ಹೌದು, ರಶ್ಮಿಕಾ ಮಂದಣ್ಣ ಎಂದು ಹೇಳಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಅಸಲಿಯಾ ಅಥವಾ ನಕಲಿಯಾ (Fake Video) ಎಂದು ಪತ್ತೆ ಹಚ್ಚುವಲ್ಲಿ ಹಲವರು ನಿರತರಾಗಿದ್ದರು. ಆ ವಿಡಿಯೋ ಖಂಡಿತಾ ರಶ್ಮಿಕಾ ಅವರದ್ದು ಅಲ್ಲ ಎಂದು ಕೆಲವರು ಹೇಳಿದ್ದರು. ಕೊನೆಗೂ ಅಭಿಷೇಕ್ ಅಸಲಿ ಮತ್ತು ನಕಲಿ ಎರಡೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Advertisement
Advertisement
???? There is an urgent need for a legal and regulatory framework to deal with deepfake in India.
You might have seen this viral video of actress Rashmika Mandanna on Instagram. But wait, this is a deepfake video of Zara Patel.
This thread contains the actual video. (1/3) pic.twitter.com/SidP1Xa4sT
— Abhishek (@AbhishekSay) November 5, 2023
Advertisement
ವೈರಲ್ ಆಗಿರುವ ವಿಡಿಯೋ ಝರಾ ಪಟೀಲ್ (Zara Patel) ಎನ್ನುವವರದ್ದು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಝರಾ ಪಟೇಲ್ ಅವರು ಆ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋಗೆ ರಶ್ಮಿಕಾ ತಲೆಯನ್ನು ಮಾಸ್ಕ್ ಮಾಡಿ ಹರಿಬಿಟ್ಟಿದ್ದರು ಕಿಡಿಕೇಡಿಗಳು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.
ಅಭಿಷೇಕ್ ಅವರು ಹಂಚಿಕೊಂಡ ಪೋಸ್ಟ್ ಅನ್ನು ಹೆಸರಾಂತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಶೇರ್ ಮಾಡಿದ್ದರು. ಇದು ಮಹಾಪರಾಧ. ತಕ್ಷಣವೇ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಮಿತಾಭ್ ಹೇಳಿದ್ದಾರೆ. ಈ ರೀತಿ ಯಾರಿಗೂ ಅಪಮಾನ ಮಾಡಬಾರದು ಎಂದು ಅವರು ತಿಳುವಳಿಕೆ ನೀಡಿದ್ದಾರೆ.