ತೆಲುಗಿನಲ್ಲಿ ಶ್ರೀಲೀಲಾ ಕಮಾಲ್- ಬಾಲಿವುಡ್ ಸಿನಿಮಾದತ್ತ ರಶ್ಮಿಕಾ ಮಂದಣ್ಣ

Public TV
1 Min Read
sreeleela 1 2

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಕನ್ನಡ ಚಿತ್ರದಿಂದ ನಟನೆಗೆ ಎಂಟ್ರಿ ಕೊಟ್ಟಿದ್ದರು ಕೂಡ. ಸೌತ್ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು. ರಶ್ಮಿಕಾ ನಟಿಸಬೇಕಿದ್ದ ಸಿನಿಮಾಗಳು ಒಂದೊಂದೇ ಪ್ರಾಜೆಕ್ಟ್‌ಗಳು ಶ್ರೀಲೀಲಾ ಕೈ ಸೇರುತ್ತಿದೆ. ನಿತಿನ್ ಸಿನಿಮಾಶದಿಂದ ರಶ್ಮಿಕಾ ಹೊರಬಂದಿದ್ದರು. ಈ ಚಿತ್ರಕ್ಕೆ ಶ್ರೀಲೀಲಾ (Sreeleela) ನಾಯಕಿಯಾಗಿದ್ದಾರೆ. ಈ ಬೆನ್ನಲ್ಲೇ ರಶ್ಮಿಕಾ ಬಾಲಿವುಡ್‌ನತ್ತ (Bollywood) ಮುಖ ಮಾಡಿದ್ದಾರೆ. ಇದನ್ನೂ ಓದಿ:ಮನೀಷ್ ಮಲ್ಹೋತ್ರಾ ನಿರ್ದೇಶನದಲ್ಲಿ ಮೀನಾ ಕುಮಾರಿ ಬಯೋಪಿಕ್- ಕೃತಿ ಸನೋನ್ ನಾಯಕಿ?

rashmika mandanna

ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮೇಲಿರುವ ಕ್ರೇಜ್ ಎಲ್ಲೂ ಕಮ್ಮಿ ಆಗಿಲ್ಲ. ಪುಷ್ಪ 2, ಅನಿಮಲ್, ರೈನ್ ಬೋ ಸಿನಿಮಾ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ ಮಂದಣ್ಣಗೆ ಕೊಂಚ ಎಫೆಕ್ಟ್ ಆದಂತಿದೆ. ರಶ್ಮಿಕಾ ಕೈಯಲ್ಲಿ 4-5 ಪ್ರಾಜೆಕ್ಟ್ ಇದ್ರೆ, ಶ್ರೀಲೀಲಾ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.

rashmika mandanna 6

ಈ ಹಿಂದೆ ತೆಲುಗು ನಟ ನಿತಿನ್ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಫೈನಲ್ ಆಗಿದ್ದರು. ಆದರೆ ಏಕಾಏಕಿ ಏನಾಯ್ತೋ ಏನೋ ಸಿನಿಮಾ ತಂಡಕ್ಕೆ ನಟಿ ಗುಡ್ ಬೈ ಹೇಳಿದ್ದರು. ಹೀಗೆ ರಶ್ಮಿಕಾ ಕೈಬಿಟ್ಟ ಸಿನಿಮಾಗಳೆಲ್ಲ ಶ್ರೀಲೀಲಾ ಪಾಲಾಗುತ್ತಿದೆ. ಇದೆಲ್ಲದರನಡುವೆ ತೆಲುಗಿನಲ್ಲಿ ಡಿಮ್ಯಾಂಡ್ ಕಮ್ಮಿಯಾಗುತ್ತಿದ್ದಂತೆ ಬಾಲಿವುಡ್‌ನತ್ತ ಕೊಡಗಿನ ಕುವರಿ ಮುಖ ಮಾಡಿದ್ದಾರೆ. ರಶ್ಮಿಕಾ ನಟನೆಯ ಹೊಸ ಹಿಂದಿ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಅನೀಸ್ ಬಾಜ್ಮೀ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ.

ಗುಡ್ ಬೈ, ಮಿಷನ್ ಮಜ್ನು, ಅನಿಮಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಶಾಹಿದ್ ಕಪೂರ್(Shahid Kapoor) ಜೊತೆ ರೊಮ್ಯಾನ್ಸ್ ಮಾಡಲು ರಶ್ಮಿಕಾ ಸಜ್ಜಾಗಿದ್ದಾರೆ. ಹೊಸ ಪ್ರೇಮಕಥೆಯನ್ನ ಹೇಳಲು ಈ ಜೋಡಿ ಸಜ್ಜಾಗಿದೆ. `ಏಕ್ ಸಾಥ್ ದೋ ದೋ’ ಎಂದು ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಿದೆ.

Share This Article