ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ದೂರವಾದ ನಂತರ ಯಾವತ್ತೂ ರಶ್ಮಿಕಾ ಅವರ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದವರಲ್ಲ ರಕ್ಷಿತ್ ಶೆಟ್ಟಿ. ಮೊನ್ನೆಯಷ್ಟೇ ಸಂದರ್ಶನವೊಂದರಲ್ಲಿ ರಶ್ಮಿಕಾ ಬಗ್ಗೆ ಮಾತನಾಡುತ್ತಾ, ಅವರ ಬೆಳವಣಿಗೆ ಖುಷಿ ತಂದಿದೆ ಎಂದು ಹೇಳಿದ್ದರು. ಅಲ್ಲದೇ ತಮ್ಮ ಪರಮ್ ಸ್ಟುಡಿಯೋಸ್ ನಿಂದ ಏಪ್ರಿಲ್ 5 ರಂದು ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೂಡ ಹೇಳಿದ್ದಾರೆ. ಇಂದು ರಕ್ಷಿತ್ ಶೆಟ್ಟಿ ಬರ್ತ್‌ಡೇ. ಆದರೆ ರಶ್ಮಿಕಾ ಶುಭಾಶಯ ಹೇಳಲೇ ಇಲ್ಲ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
ಈ ಹಿಂದೆಯೂ ರಶ್ಮಿಕಾ ಅವರು ಕನ್ನಡದ ಅನೇಕ ನಟರ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವುದಾಗಲಿ, ಅಥವಾ ನಿಧನರಾದಾಗ ಶಾಂತಿ ಕೋರುವುದಾಗಲಿ ಮಾಡದೇ ಅಭಿಮಾನಿಗಳ ಕೋಪಕ್ಕೆ ಕಾರಣರಾಗಿದ್ದರು. ಇವತ್ತು ಕೂಡ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಒಳ್ಳೆಯ ಹೃದಯವಿರುವ ವ್ಯಕ್ತಿಯ ಋಣದಲ್ಲಿದ್ದೀರಿ ಎಂದು ಹಲವರು ಬರೆದುಕೊಂಡಿದ್ದಾರೆ.
Wishing the star, the beautiful @iamRashmika a fabulous birthday. May you continue to rise from strength to strength????♥️#ParamvahStudios pic.twitter.com/k0uduT2V6f
— Paramvah Studios (@ParamvahStudios) April 5, 2022
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು ರಕ್ಷಿತ್. ಈ ಸಿನಿಮಾ ಕೂಡ ದೊಡ್ಡ ಹಿಟ್ ಆಯಿತು. ದೊಡ್ಡ ಹೆಸರು ಕೂಡ ಬಂತು. ಕನ್ನಡ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಸಿಗಲು ಇದೇ ಚಿತ್ರ ನೆರವಾಯಿತು. ಆನಂತರ ರಕ್ಷಿತ್ ಮತ್ತು ರಶ್ಮಿಕಾ ಪ್ರೀತಿಸುತ್ತಿರುವ ವಿಷಯ ಹೊರಬಂತು.
ಈ ಜೋಡಿ ಪ್ರೀತಿಸುತ್ತಿದ್ದಾರೆ ಎಂದಾಗ ಅಭಿಮಾನಿಗಳು ಅದ್ಭುತ ಜೋಡಿ ಎಂದು ಬಣ್ಣಿಸಿದರು. ಹಾಗಾಗಿ ಎಂಗೇಜ್‌ಮೆಂಟ್ ಕೂಡ ಆಯಿತು. ವೈಯಕ್ತಿಕ ಕಾರಣಗಳಿಂದಾಗಿ ಇಬ್ಬರೂ ದೂರವಾದರು. ಇಷ್ಟಾದರೂ ರಕ್ಷಿತ್ ಒಂದು ದಿನವೂ ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿಲ್ಲ. ಅವರಿಗೆ ಒಳ್ಳೆಯದನ್ನೇ ಬಯಸಿದ್ದಾರೆ. ಹಾಗಾಗಿ ಇವತ್ತೊಂದು ಶುಭಾಶಯವನ್ನು ರಶ್ಮಿಕಾ ಹೇಳಬೇಕಿತ್ತು ಎನ್ನುವುದು ರಕ್ಷಿತ್ ಅಭಿಮಾನಿಗಳ ಆಸೆಯಾಗಿತ್ತು.