ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಹೀರೋಗಳ ಪಾಲಿಗೆ ಅದೃಷ್ಟದ ನಟಿಯಾಗಿದ್ದಾರೆ. ‘ಪುಷ್ಪ 2’, ‘ಛಾವಾ’ (Chhavva) ಸಿನಿಮಾಗಳ ಬಳಿಕ ಮತ್ತೊಂದು ಬಿಗ್ ಪ್ರಾಜೆಕ್ಟ್ ಮೂಲಕ ನಟಿ ಅಬ್ಬರಿಸಲು ರೆಡಿಯಾಗಿದ್ದಾರೆ. ಹೊಸ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ಇದನ್ನೂ ಓದಿ:ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ
ಐತಿಹಾಸಿಕ ಸಿನಿಮಾ ‘ಛಾವಾ’ ರಿಲೀಸ್ ಆಗಿರೋ ಬೆನ್ನಲ್ಲೇ ಧನುಷ್ (Dhanush) ಮತ್ತು ರಶ್ಮಿಕಾ ನಟನೆಯ ‘ಕುಬೇರ’ (Kubera) ಸಿನಿಮಾದ ರಿಲೀಸ್ ಡೇಟ್ ರಿವೀಲ್ ಆಗಿದೆ. ಇದೇ ಜೂನ್ 20ರಂದು ರಿಲೀಸ್‌ಗೆ ಸಜ್ಜಾಗಿದೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸುದೀಪ್
Kubera releasing on 20th June ☄️ @dhanushkraja @iamnagarjuna @iamRashmika @sekharkammula @ThisIsDSP @SVCLLP @amigoscreation @jimSarbh @AsianSuniel pic.twitter.com/5YhxN7IwbQ
— Rashmika Mandanna (@iamRashmika) February 27, 2025
ಇನ್ನೂ ಈ ಚಿತ್ರದಲ್ಲಿ ಧನುಷ್ ಭಿಕ್ಷುಕನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಪವರ್‌ಫುಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ರಶ್ಮಿಕಾ ಮಂದಣ್ಣ ಮಧ್ಯಮ ವರ್ಗದ ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
‘ಪುಷ್ಪ 2’ ಚಿತ್ರದ ಬಿಗ್ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್ ಹಾಗೂ ಸೌತ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.