ಬೆಂಗಳೂರು: ಕಿರಿಕ್ ಜೋಡಿ ಅಂದ ತಕ್ಷಣ ತಟ್ಟನೆ ನೆನಪಾಗೋದು ರಕ್ಷಿತ್ ಮತ್ತು ರಶ್ಮಿಕಾ ಮಂದಣ್ಣ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಸೂಪರ್ ಹಿಟ್ ಆಗಿ ಸಿನಿರಸಿಕರಿಗೆ ಮೋಡಿ ಮಾಡಿತ್ತು. ಈ ಜೋಡಿ ನಿಜ ಜೀವನದಲ್ಲೂ ಒಂದಾಗ್ತಿದೆ. ಈ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಲವ್ ಆಗಿದೆ ಎಂಬ ಸುದ್ದಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಈಗ ಹರಿದಾಡುತ್ತಿದೆ.
ಇದೇ ತಿಂಗಳು ಎಂಗೇಜ್‍ಮೆಂಟ್ ಕೂಡ ಆಗುತ್ತದೆ. ಅಷ್ಟೇ ಅಲ್ಲ ಎರಡು ವರ್ಷಗಳಲ್ಲಿ ಮದ್ವೆ ಕೂಡ ಆಗುತ್ತೆ ಅನ್ನೊ ಮಾತು ಜೋರಾಗಿಯೇ ಕೇಳಿ ಬರುತ್ತಿದೆ. ನಿನ್ನೆಯಷ್ಟೇ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ರಕ್ಷಿತ್ ನಗುನಗುತ್ತಾ ಆ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ರು. ಆದರೆ ಇಂದು ರಶ್ಮಿಕಾ ಪಬ್ಲಿಕ್ ಟಿವಿಗೆ ತಮ್ಮ ಮದುವೆ ಬಗ್ಗೆ ಹೀಗೆ ಹೇಳಿದ್ದಾರೆ.
ನನಗೆ ಇತ್ತೀಚಿಗೆ ಈ ಸುದ್ದಿ ತಿಳಿಯಿತು. ಅದೂವರೆಗೂ ಗೊತ್ತಿರಲಿಲ್ಲ. ಇದು ಸುಳ್ಳು ಸುದ್ದಿ. ಇದರಿಂದ ನನ್ನ ಸಿನಿ ಕೆರಿಯರ್‍ಗೆ ತೊಂದರೆ ಆಗುತ್ತದೆ. ದಯವಿಟ್ಟು ಈ ರೀತಿಯ ಸುದ್ದಿಗಳನ್ನು ಹಬ್ಬಿಸಬೇಡಿ. ನಾನು ಮೂರ್ನಾಲ್ಕು ಫಿಲ್ಮ್‍ಗಳಲ್ಲಿ ಬ್ಯೂಸಿಯಾಗಿದ್ದೇನೆ. ನನ್ನ ಖಾಸಗಿ ವಿಚಾರಗಳಿಗೆ ಸಮಯ ಸಿಗುತ್ತಿಲ್ಲ. ನನಗೆ ಪ್ರತಿದಿನ ತುಂಬಾ ಕೆಲಸಗಳಿರುತ್ತವೆ. ಪರೀಕ್ಷೆಗಳಿವೆ. ಶೂಟಿಂಗ್‍ನಲ್ಲಿ ಬ್ಯೂಸಿಯಿದ್ದೇನೆ. ನನಗೆ ಲವ್ ಮಾಡಲು ಸಮಯವಿಲ್ಲ. ರಕ್ಷಿತ್ ಅವರು ಸಹ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಮತ್ತು ನನ್ನ ನಡುವಿನ ಸುದ್ದಿಗಳೆಲ್ಲಾ ಫೇಕ್ ಎಂದು ರಶ್ಮಿಕಾ ಹೇಳಿದ್ದಾರೆ.
ಕಿರಿಕ್ ಪಾರ್ಟಿ ನಿರ್ದೇಶಕ ರಿಷಬ್ ಶೆಟ್ಟಿ ಫೆ.9 ರಂದು ಕುಂದಾಪುರದ ಕೋಟೇಶ್ವರದಲ್ಲಿ ಪ್ರಗತಿ ಅವರನ್ನು ಮದುವೆಯಾಗಿದ್ದರು.