Connect with us

Bengaluru City

ಸ್ನೇಹವಾಗಿ ಬ್ರೇಕಪ್ ಆಗಿದ್ದು ಯಾಕೆ: ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟ ರಶ್ಮಿಕಾ

Published

on

ಬೆಂಗಳೂರು: ತೆಲುಗು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ರಶ್ಮಿಕಾ ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ತೆಲುಗು ಚಿತ್ರ ದೇವದಾಸ್ ಪ್ರಚಾರದ ಕುರಿತಾಗಿ ಸಂದರ್ಶನ ನೀಡಿದ್ದ ರಶ್ಮಿಕಾ ಈ ವೇಳೆ ರಕ್ಷಿತ್ ಜೊತೆ ತಮಗೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಮದುವೆಗೂ ಮುನ್ನ ಬ್ರೇಕಪ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಇದನ್ನು ಓದಿ: ರಶ್ಮಿಕಾ ಬಗ್ಗೆ ನಿಮಗಿಂತ ನನಗೆ ಚೆನ್ನಾಗಿ ಗೊತ್ತು – ಕೊನೆಗೂ ಮೌನ ಮುರಿದ ರಕ್ಷಿತ್ ಶೆಟ್ಟಿ

ಕಿರಿಕ್ ಪಾರ್ಟಿ ಸಿನಿಮಾ ಶೂಟಿಂಗ್ ವೇಳೆ ರಕ್ಷಿತ್ ಪರಿಚಯವಾದರು. ನಂತರ ಸ್ನೇಹವಾಗಿ ಪ್ರೀತಿಯೂ ಆಯ್ತು. ಪ್ರೀತಿ ವಿಚಾರ ಮೊದಲು ಅಮ್ಮನಿಗೆ ಹೇಳಿದ್ದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ನಿಶ್ಚಿತಾರ್ಥದ ಬಳಿಕ ಭಿನ್ನಾಭಿಪ್ರಾಯ ಉಂಟಾಯಿತು. ಹೀಗಾಗಿ ರಕ್ಷಿತ್ ಜೊತೆ ಸಂಬಂಧ ಕಡಿತಗೊಳಿಸಿದ್ದಾಗಿ ತಿಳಿಸಿದರು.

ಈ ಹಿಂದೆ ರಕ್ಷಿತ್ ಶೆಟ್ಟಿ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಎಲ್ಲವೂ ನಿಜವಲ್ಲ ಎಂದು ಹೇಳಿದ್ದರು. ಈ ಮಧ್ಯೆ ರಶ್ಮಿಕಾ ಮಂದಣ್ಣ ಕುಟುಂಬ ಬ್ರೇಕಪ್ ಆಗಿರುವುದು ನಿಜ ಎಂದು ಹೇಳಿತ್ತು. ಈ ವಿಚಾರವಾಗಿ ರಶ್ಮಿಕಾ ಎಲ್ಲೂ ಸರಿಯಾಗಿ ಸ್ಪಷ್ಟನೆ ನೀಡಿರಲಿಲ್ಲ. ಈಗ ದೇವದಾಸ್ ಸಿನಿಮಾದ ಪ್ರಚಾರದ ವೇಳೆಯಲ್ಲಿ ರಶ್ಮಿಕಾ, ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ನಮ್ಮ ನಡುವೆ ತಪ್ಪು, ಒಪ್ಪು ಕಾಣಿಸಿದ ಪರಿಣಾಮ ಬ್ರೇಕಪ್ ತೆಗೆದುಕೊಂಡಿದ್ದೇವೆ. ಸದ್ಯಕ್ಕೆ ನಾನು ಸಿನಿಮಾವನ್ನು ಮಾತ್ರ ಪ್ರೀತಿಸುತ್ತೇನೆ ಎಂದು ಹೇಳಿರುವುದಾಗಿ ತೆಲುಗು ವೆಬ್‍ಸೈಟ್ ಪ್ರಕಟಿಸಿದೆ.

15 ದಿನಗಳ ಹಿಂದೆ ಕನ್ನಡದ ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ, ರಶ್ಮಿಕಾ ಬ್ರೇಕಪ್ ವಿಷಯವನ್ನು ಹೇಳಿದ್ದರು. ಕುಟುಂಬದ ನಿರ್ಧಾರವೇ ನನ್ನ ನಿರ್ಧಾರ. ಅಪ್ಪ ಅಮ್ಮ ನನ್ನ ಜೀವನದ ಬಗ್ಗೆ ಏನನ್ನು ನಿರ್ಧರಿಸುತ್ತಾರೋ ಅದಕ್ಕೆ ನನ್ನ ಒಪ್ಪಿಗೆ ಇದೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *