ಕನ್ನಡದ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಅದೃಷ್ಟ ಕೈ ಹಿಡಿದಿದೆ. ‘ಮಿಷನ್ ಮಜ್ನು’, ‘ಗುಡ್ ಬೈ’ ಸಿನಿಮಾದ ಸೋಲಿನ ನಂತರ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಕಾರಣ, ಅನಿಮಲ್ ಸಿನಿಮಾ ಸಕ್ಸಸ್ ಕಂಡಿರೋದು. ‘ಅನಿಮಲ್’ (Animal Film) ಚಿತ್ರ ವರ್ಲ್ಡ್ ವೈಡ್ ಕಲೆಕ್ಷನ್ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ಅನಿಮಲ್ ಚಿತ್ರದ ಮೂಲಕ ರಶ್ಮಿಕಾಗೆ ಲಕ್ ಕೈ ಹಿಡಿದಿದೆ.
ರಣ್‌ಬೀರ್ ಕಪೂರ್‌ಗೆ ನಾಯಕಿಯಾಗಿ ನಟಿಸಿದ ಮೇಲೆ ರಶ್ಮಿಕಾ ಲಕ್ ಬದಲಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಅಂದ್ರೆ ಗೀತಾಂಜಲಿ ಪಾತ್ರಕ್ಕೆ ಸ್ಕೋಪ್ ಇದ್ದು, ರಣ್‌ಬೀರ್ ಜೊತೆ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ. ತುಸು ಜಾಸ್ತಿಯೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶಿವರಾಜ್ ಕುಮಾರ್ ಭೇಟಿಯಾದ ತೆಲುಗು ನಟ ನಾನಿ
ಡಿಸೆಂಬರ್ 1ರಂದು ‘ಅನಿಮಲ್’ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ರಿಲೀಸ್ ಆಗಿ ನಾಲ್ಕೇ ದಿನಕ್ಕೆ 425 ಕೋಟಿ ರೂಪಾಯಿ ಬಾಚಿದೆ. 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವತ್ತ ಮುನ್ನುಗ್ಗುತ್ತಿದೆ. ‘ಅನಿಮಲ್’ ಚಿತ್ರದ ಬಗ್ಗೆ ಟಾಕ್ ಇರೋದು ನೋಡಿದ್ರೆ, 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೂ ಅಚ್ಚರಿಪಡಬೇಕಿಲ್ಲ ಅಂತಿದ್ದಾರೆ ಪ್ರೇಕ್ಷಕರು.
ತಂದೆ ಮತ್ತು ಮಗನ ಬಾಂಧವ್ಯ ಸಾರುವ ಕಥೆಯಲ್ಲಿ ತಂದೆ ಮತ್ತು ಮಗನಾಗಿ ಅನಿಲ್ ಕಪೂರ್- ರಣ್‌ಬೀರ್ (Ranbir Kapoor) ಕಾಂಬಿನೇಷನ್ ವರ್ಕ್ ಆಗಿದೆ. ರಣ್‌ಬೀರ್ ಮತ್ತು ರಶ್ಮಿಕಾ ಚಿತ್ರದಲ್ಲಿ ರೊಮ್ಯಾಂಟಿಕ್ ಕಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ‘ಅನಿಮಲ್’ ಚಿತ್ರದ ಕಲೆಕ್ಷನ್ ಸ್ಪೀಡ್ ನೋಡಿ ಇನ್ನೂ ಬಾಲಿವುಡ್‌ನಲ್ಲಿಯೂ ರಶ್ಮಿಕಾ ಹಾವಳಿ ಶುರು ಅಂತಿದ್ದಾರೆ ಅಭಿಮಾನಿ ಪ್ರಭುಗಳು.