ಕೊಡಗಿನ ಬ್ಯೂಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮಾತ್ರವಲ್ಲ, ಪ್ರತಿಷ್ಠಿತ ಜಾಹಿರಾತುಗಳಿಗೆ ಶ್ರೀವಲ್ಲಿನೇ ಬೇಕು ಬಂಪರ್ ಆಫರ್ಸ್ ಹರಿದು ಬರುತ್ತಿದೆ. ಈ ನಡುವೆ ಹೊಸ ಪ್ರಾಜೆಕ್ಟ್‌ಗಾಗಿ ಮತ್ತೆ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ತೆರೆಹಂಚಿಕೊಂಡಿದ್ದಾರೆ. ಈ ಕುರಿತು ವಿಶೇಷ ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ.

ವಿಕ್ಕಿ ಕೌಶಲ್, ರಶ್ಮಿಕಾ `ನಿಮ್ಮ ಜೊತೆಗೆ ಕೆಲಸ ಮಾಡಿರುವುದು ನಿಜಕ್ಕೂ ಅದ್ಭುತ’ ಎಂದು ಬರೆದುಕೊಂಡಿದ್ದರೆ, ಪ್ರೀತಿ ನನ್ನ ಮನಸ್ಸಿಗೆ ನಾಟಿಗೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಈ ಹೊಸ ಜೋಡಿ, ಸಿನಿಮಾಗಾಗಿ ಮತ್ತೆ ಒಟ್ಟಿಗೆ ಕೆಲಸ ಮಾಡ್ತಿದ್ದರಾ ಅಂತಾ ಅಭಿಮಾನಿಗಳ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.


