ರಶ್ಮಿಕಾ ಮಂದಣ್ಣ (Rashmika Mandanna) ಮದ್ವೆ ವಿಚಾರದಲ್ಲಿ ಸಾಕಷ್ಟು ಬಾರಿ ನಿಶ್ಚಿತಾರ್ಥ, ಮದ್ವೆ ಆಗಿ ಹೋಗಿದೆ. ಜಾಲತಾಣದಲ್ಲಿ ಅವರ ಫೋಟೋಗಳು, ವಿಡಿಯೋಗಳು ಇದೇ ಮೊದಲಲ್ಲ ಹಲವಾರು ಬಾರಿ ಹರಿದಾಡುತ್ತಲೇ ಇವೆ. ಆದ್ರೆ ಈ ಬಾರಿ ಮದ್ವೆ ಫೋಟೋ ಜೊತೆಗೆ ಸೆಲೆಬ್ರಿಟಿಗಳು ಸಹ ಪೋಸ್‌ಕೊಟ್ಟು ನಿಂತಿರೋದು ಮೊದಲ ಸಲ ನೋಡಿದಾಗ ರಶ್ಮಿಕಾ ಫ್ಯಾನ್ಸ್ ಶಾಕ್ ಆಗಿದ್ದಾರೆ. ಫೋಟೋಗಳನ್ನ ಒಮ್ಮೆ ಬಿಟ್ಟು ಮತ್ತೊಮ್ಮೆ ನೋಡಿದಾಗಲೇ ಅದರ ಅಸಲಿಯತ್ತು ತಿಳಿದಿದೆ. ಇದು ರಿಯಲ್ ಅಲ್ಲ, ಎಐ ತಂತ್ರಜ್ಞಾನದ ಮೂಲಕ ಫೋಟೋಗಳನ್ನ ಎಡಿಟ್ ಮಾಡಲಾಗಿದೆ ಅನ್ನೋದು.
ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಹರಿದಾಡ್ತಿರುವ ಹಿನ್ನೆಲೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದ್ವೆ ಆಗಿಯೇ ಬಿಟ್ಟರಾ ಎಂದು ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ಸಖತ್ ವೈರಲ್ ಆಗ್ತಿವೆ. ಯಾಕಂದ್ರೆ ಇದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಗುಟ್ಟಾಗಿ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಮದ್ವೆಯನ್ನೂ ಕೂಡಾ ರಹಸ್ಯವಾಗಿ ಮಾಡಿಕೊಂಡಿದ್ದಾರಾ ಎನ್ನುವ ಚರ್ಚೆಗಳು ಜೋರಾಗಿಯೇ ನಡೆದಿದೆ. ಇದನ್ನೂ ಓದಿ: ರಶ್ಮಿಕಾ ಕೈಗೆ ದೇವರಕೊಂಡ ಸಿಹಿಮುತ್ತು… ಮದುವೆ ಗುಟ್ಟು ರಟ್ಟಾಯ್ತು

ಸೀಕ್ರೆಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ ಹಾಗೂ ವಿಜಯ್ ಜೋಡಿ, 2026ರ ಫೆಬ್ರವರಿ 26ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದ್ವೆ ಮಾಡಿಕೊಳ್ಳಲು ಪ್ಲ್ಯಾನ್ ಮಾಡಲಾಗಿದೆಯಂತೆ. ಅರಮನೆಗಳ ತವರು ಎಂದೇ ಖ್ಯಾತಿಯಾಗಿರುವ ಉದಯಪುರದ ಅರಮನೆಯಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ (Vijay Deverakonda) ಮದ್ವೆ ನೆರವೇರಲಿದೆ. ಈ ಅದ್ಧೂರಿ ಮದ್ವೆಯಲ್ಲಿ ಸೌತ್‌ನ ಸೂಪರ್‌ಸ್ಟಾರ್ ಹಾಗೂ ಉತ್ತರ ಭಾರತದ ತಾರೆಯರ ಸಮಾಗಮವಾಗಲಿದೆ ಎನ್ನಲಾಗ್ತಿದೆ. ಆ ನಿಟ್ಟಿನಲ್ಲಿ ಈಗಾಗ್ಲೇ ಸಕಲ ತಯಾರಿ ನಡೆದಿವೆ. ಆದ್ರೆ ಇದೇ ವೇಳೆ ಈ ರೀತಿ ಫೋಟೋಗಳು ಹರಿದಾಡಿರೋದು ಸೋಜಿಗವಾಗಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಭಾರತೀಯ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ಸ್ ಜೊತೆ ತೆರೆಹಂಚಿಕೊಂಡು ಖ್ಯಾತಿ ಪಡೆದಿದ್ದಾರೆ. ಹೀಗಾಗಿ, ತಮ್ಮ ಮದ್ವೆಗೆ ಸಮಯ ತೆಗೆದುಕೊಂಡು ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಈ ಫೋಟೋ ವೈರಲ್ ಆಗಿರೋದು ಸಹಜವಾಗಿಯೇ ರಶ್ಮಿಕಾ ಹಾಗೂ ವಿಜಯ್ ಆಪ್ತವಲಯಕ್ಕೆ ಹಾಗೂ ಕುಟುಂಬಸ್ಥರಿಗೆ ಆತಂಕವನ್ನ ತಂದೊಡ್ಡಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನ ನಮ್ಮ ಜೀವನದಲ್ಲಿ ಎಷ್ಟು ಪೂರಕವಾಗಿದೆಯೋ ಅಷ್ಟೇ ಮಾರಕವಾಗಿ ಪರಿಣಮಿಸುತ್ತಿದೆ. ವೈರಲ್ ಆಗ್ತಿರುವ ಈ ಫೋಟೋಗಳನ್ನು ಎಐ ತಂತ್ರಜ್ಞಾನಂದ ಸೃಷ್ಟಿಸಿ ಹರಿಬಿಡಲಾಗಿದೆ. ಇದನ್ನೂ ಓದಿ: ಇಂದು ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಅಧಿಕೃತ ಘೋಷಣೆ?

