ಬಣ್ಣದ ಲೋಕದಲ್ಲಿ ಒಬ್ಬ ನಟಿಯನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಸ್ಟಾರ್ ನಟಿಯರು ಒಬ್ಬರಿಗೊಬ್ಬರು ಫ್ರೆಂಡ್ಸ್ ಆಗೋದು ಇನ್ನೂ ದೂರದ ಮಾತು. ಹೀಗಿರುವಾಗ ನಟಿ ಕಲ್ಯಾಣಿ (Kalyani Priyadarshan) ಅವರನ್ನು ರಶ್ಮಿಕಾ ಮಂದಣ್ಣ (Rashmika Mandanna) ಭೇಟಿಯಾಗಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಲ್ಯಾಣಿ (Actress Kalyani) ಜೊತೆಗಿನ ಚೆಂದದ ಫೋಟೋ ಹಂಚಿಕೊಂಡು ನನ್ನ ಕಡೆಯಿಂದ ಬರೀ ಪ್ರೀತಿ, ಮತ್ತೆ ಸಿಗೋಣ ಎಂದು ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ದೊಡ್ಮನೆಯ ಹೀರೋ, ಹೀರೋಯಿನ್, ವಿಲನ್ ಇವರೇ ಎಂದ ತುಕಾಲಿ
ವಿಮಾನ ನಿಲ್ದಾಣಕ್ಕೆ ಬರುವ ಮುಂಚೆಯೇ ಇಬ್ಬರೂ ಕೆಲ ಕಾಲ ಸಮಯ ಕಳೆದಿದ್ದಾರೆ. ಆದರೂ ಇಬ್ಬರ ಒಡನಾಟ ನೋಡಿ ಪರವಾಗಿಲ್ವೇ ಸ್ಟಾರ್ ನಟಿಯರು ಅಹಂ ಬಿಟ್ಟು ಒಟ್ಟಾಗುತ್ತಿದ್ದಾರಲ್ಲ ಎಂದು ಫ್ಯಾನ್ಸ್ ಖುಷಿಪಡುತ್ತಿದ್ದಾರೆ.
ಇನ್ನೂ ರಶ್ಮಿಕಾ ‘ಅನಿಮಲ್’ (Animal) ಸಕ್ಸಸ್ ನಂತರ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಲ್ಯಾಣಿ, ಸೌತ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.



