ಕನ್ನಡದ ನಟಿ ರಶ್ಮಿಕಾ ಮಂದಣ್ಣ ತಮಿಳು, ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟು, ಬಾಲಿವುಡ್ ಗೂ ಹಾರಿದ್ದರು. ಇವರ ನಟನೆಯ ಮೊದಲನೇ ಬಾಲಿವುಡ್ ಸಿನಿಮಾ ಇದೀಗ ರಿಲೀಸ್ ಆಗುತ್ತಿದ್ದು, ಮೊದಲ ಚಿತ್ರವನ್ನು ಬಾಲಿವುಡ್ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದು ನೋಡಬೇಕು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’
ಈಗಾಗಲೇ ಬಾಲಿವುಡ್ ನಲ್ಲಿ ರಶ್ಮಿಕಾ ಎರಡು ಚಿತ್ರಗಳಲ್ಲಿ ನಟಿಸಿದ್ದರೂ, ಮೊದಲು ಬಿಡುಗಡೆ ಆಗುತ್ತಿರುವುದು ಸಿದ್ಧಾರ್ಥ ಮಲ್ಹೋತ್ರ ನಾಯಕನಾಗಿ ನಟಿಸಿರುವ ‘ಮಿಷನ್ ಮಜ್ನು’ ಸಿನಿಮಾ. ಇದು ಬಾಲಿವುಡ್ ನ ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿದ್ದು, ರಶ್ಮಿಕಾಗೆ ಬಾಲಿವುಡ್ ನಲ್ಲೂ ಅದೃಷ್ಟ ತಂದುಕೊಡುತ್ತಾ ಕಾಯಬೇಕು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್
ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಮೇ 13 ರಂದು ದೇಶಾದ್ಯಂತ ಬಿಡುಗಡೆ ಆಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಜೂನ್ 10ಕ್ಕೆ ರಿಲೀಸ್ ಆಗಲಿದೆಯಂತೆ. ಸ್ವತಃ ಈ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಟ್ರೋಲಿಗರ ಚಳಿ ಬಿಡಿಸಿದ ಸನ್ನಿ ಲಿಯೋನ್
“ಇತಿಹಾಸ ಪುಟಗಳ ಅನುಭವ ಪಡೆಯಲು ನೀವು ರೆಡಿಯಾಗಿ. ಇದು ಅಂತಿಂಥ ಮಿಷನ್ ಅಲ್ಲ” ಎಂದೂ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಹರೀಶ್ ವಯಸ್ಸು 36 ಹಾಸ್ಯ ಸಿನಿಮಾಗಾಗಿ ಟೈಟಲ್ ಸಾಂಗ್ ಹಾಡಿದ ಪುನೀತ್
ಇದೊಂದು ನೈಜ ಘಟನೆಯನ್ನು ಆಧರಿಸಿದ ಚಿತ್ರ. 2020ರಲ್ಲೇ ಈ ಸಿನಿಮಾವನ್ನು ನಿರ್ದೇಶಕ ಶಾಂತನು ಬಗ್ಚಿ ಅನೌನ್ಸ್ ಮಾಡಿದ್ದರು. ಕೋವಿಡ್ ಕಾರಣದಿಂದಾಗಿ ಚಿತ್ರೀಕರಣ ವಿಳಂಬವಾಯಿತು. ಇದೀಗ ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಬಾಲಿವುಡ್ ನ ಮೊದಲ ಸಿನಿಮಾವನ್ನು ಅಭಿಮಾನಿಗಳಿಗೆ ತೋರಿಸಲು ರಶ್ಮಿಕಾ ತುದಿಗಾಲಲ್ಲಿ ನಿಂತಿದ್ದಾರೆ.