ಕನ್ನಡತಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಕರಣ್ ಜೋಹರ್ ಅವರ ಬರ್ತಡೇ ಪಾರ್ಟಿಯಲ್ಲಿ ಮಿರ ಮಿರ ಅಂತಾ ಮಿಂಚಿದ ನಂತರ ಈಗ ಮತ್ತೊಂದು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ರಶ್ಮಿಕಾ ಲುಕ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
View this post on Instagram
ಸ್ಯಾಂಡಲ್‌ವುಡ್ ಸಿನಿಮಾದಿಂದ ದಕ್ಷಿಣ ಸಿನಿಮಾದತ್ತ ಮುಖ ಮಾಡಿದ ನಟಿ ರಶ್ಮಿಕಾ ಈಗ ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ. ರಶ್ಮಿಕಾ ಈಗ ಎನೇ ಮಾಡಿದ್ರು ಸುದ್ದಿ, ಪ್ರತಿದಿನ ಒಂದಲ್ಲಾ ಒಂದು ಸುದ್ದಿಯಿಂದ ಸೌಂಡ್ ಮಾಡುತ್ತಲೇ ಇರುತ್ತಾರೆ. ಈಗ ಮತ್ತೆ `ಪುಷ್ಪ’ ಬ್ಯೂಟಿ ರಶ್ಮಿಕಾ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ
ಸದ್ಯ ರಶ್ಮಿಕಾ ಫಿಲ್ಮ್‌ಫೇರ್ ಭಾಗಿಯಾಗಿದ್ದು, ಕ್ಯಾಮೆರಾ ಕಣ್ಣಿಗೆ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ದಿನದಿಂದ ದಿನಕ್ಕೆ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿರೋ ರಶ್ಮಿಕಾ ಲುಕ್‌ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ. ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.