ನಟಿ ರಶ್ಮಿಕಾ ಮಂದಣ್ಣ ಕೀರ್ತಿ ಈಗ ಜಗದಗಲ ವ್ಯಾಪಿಸಿದೆ. ಸ್ಟಾರ್ ನಟರ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುವುದರ ಮೂಲಕ ಬಿಗ್‌ಬಜೆಟ್ ಚಿತ್ರಗಳ ನಾಯಕಿ ಎಂಬ ಹೆಗ್ಗಳಿಕೆ ಪಡೆದಿರೋ ರಶ್ಮಿಕಾ ಮಂದಣ್ಣ ಭಾರತೀಯ ಸಿನಿಮಾ ಇಂಡಸ್ಟ್ರಿಯ ನಟಿಯರ ಲಿಸ್ಟ್ನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಇದೀಗ ಈ ನಟಿ ಲಂಡನ್‌ಲ್ಲಿ ನಡೆದ “ವಿ ದ ವಿಮನ್” ಕಾರ್ಯಕ್ರಮದಲ್ಲಿ ಘೋಷಿಸಿರುವ ಒಂದು ಸಂಕಲ್ಪ ನಟಿಯ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.
ಸಿನಿಮಾದಲ್ಲೂ ನಿಜಜೀವನದಲ್ಲೂ ರಶ್ಮಿಕಾ ಧೂಮಪಾನವನ್ನ ಪೋಷಿಸದಿರಲು ನಿರ್ಧರಿಸಿದ್ದಾರಂತೆ. `ಸಿನಿಮಾದಲ್ಲಿ ಅದು ಪಾತ್ರವಾಗಿದ್ದರೂ ಧೂಮಪಾನ ಮಾಡೋದಿಲ್ಲ. ಅಂಥಹ ಕೃತ್ಯವನ್ನ ತೆರೆಮೇಲೆ ವಿಜೃಂಭಿಸಲು ಇಷ್ಟ ಪಡೋದಿಲ್ಲ. ಮಾಡುವ ಅನಿವಾರ್ಯತೆ ಬಂದರೆ ಅದು ಎಂಥದ್ದೇ ಚಿತ್ರವಾದರೂ ಆ ಪಾತ್ರವನ್ನ ನಾನು ತಿರಸ್ಕರಿಸಲು ಸಿದ್ಧ’. ಮಾಡುವುದು ತಪ್ಪು ಸರಿ ಅನ್ನೋದನ್ನ ನಾನು ವಿಶ್ಲೇಷಿಸೋದಿಲ್ಲ. ಧೂಮಪಾನ ಮಾಡದಿರುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದಿದ್ದಾರೆ ರಶ್ಮಿಕಾ.
ಮಹಿಳೆಯರ ಪ್ರಾಭಲ್ಯದ ಕುರಿತಾಗಿ ಏರ್ಪಡಿಲಾಗಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹೋಗಿದ್ದ ವೇಳೆ ರಶ್ಮಿಕಾ ಈ ವಿಚಾರವನ್ನ ಘೋಷಿಸಿದ್ದಾರೆ. ಸಿನಿಮಾದಲ್ಲಿ ನಟಿಸುವಾಗ ಧೂಮಪಾನ, ಮಧ್ಯಪಾನದಂತಹ ಕೃತ್ಯಗಳ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಎಂಬಂಥ ಸ್ಥಿತಿ ಈಗಿದೆ. ಇಂಥಹ ಕಾಲದಲ್ಲಿ ರಶ್ಮಿಕಾ ಮಾಡಿಕೊಂಡಿರುವ ಸಂಕಲ್ಪ ನಿಜಕ್ಕೂ ಶ್ಲಾಘನೀಯ.