ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ (Dating) ವಿಚಾರದಲ್ಲಿ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರಂತೆ. ರಶ್ಮಿಕಾ ಮಂದಣ್ಣ ಅಂದಾಕ್ಷಣ ಥಟ್ಟನೆ ನೆನಪಾಗುತ್ತಿದ್ದ ಮತ್ತೊಂದು ಹೆಸರು ವಿಜಯ್ ದೇವರಕೊಂಡ (Vijay Devarakonda) ಅವರದ್ದು. ಈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಅವರಿಬ್ಬರೂ ಒಟ್ಟಿಗೆ ಇರುವ ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳಿವೆ.
ಫೋಟೋ ಮತ್ತು ವಿಡಿಯೋಗಳು ಮಾತ್ರವಲ್ಲ ಕಳೆದ ವರ್ಷ ಹೊಸ ವರ್ಷವನ್ನೂ ಅವರು ಗೋವಾದ ಹೋಟೆಲ್ ವೊಂದರಲ್ಲಿ ಆಚರಿಸಿದ್ದರು. ವಿದೇಶ ಪ್ರವಾಸವನ್ನೂ ಒಟ್ಟಿಗೆ ಮಾಡಿದ್ದರು. ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ಅವರು ಹಲವು ರೀತಿಯಲ್ಲಿ ವ್ಯಕ್ತ ಪಡಿಸಿದ್ದರು. ಆದರೆ, ದಿಢೀರ್ ಅಂತ ದೂರವಾದ ಸುದ್ದಿಯನ್ನೂ ಕೊಟ್ಟಿದ್ದರು.
ಇತ್ತೀಚೆಗಷ್ಟೇ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ (Bellamkonda Sai Srinivas) ಜೊತೆ ರಶ್ಮಿಕಾ ಹೆಸರು ಕೇಳಿ ಬಂದಿತ್ತು. ಇಬ್ಬರೂ ಅನೇಕ ಸಲ ಒಟ್ಟಿಗೆ ಹೋಟೆಲ್ ಗಳಲ್ಲಿ ಕಾಣಿಸಿಕೊಂಡರು. ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದ್ದರು. ಹಾಗಾಗಿ ಈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಆಯಿತು. ಈ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಮತ್ತೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಇರುವುದು ಪತ್ತೆಯಾಗಿದೆ. ಇದು ನಾನಾ ಗೊಂದಲಗಳಿಗೂ ಕಾರಣವಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಫೇಸ್ ಬುಕ್ ಲೈವ್ ಕೂಡ ಮಾಡಿದ್ದಾರೆ. ಅದು ವಿಜಯ್ ದೇವರಕೊಂಡ ಮನೆಯಿಂದ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ, ರಶ್ಮಿಕಾ ಧರಿಸಿದ್ದ ಉಂಗುರ ವಿಜಯ್ ದ್ದು ಎಂದು ಹೇಳಲಾಗುತ್ತಿದೆ. ಈ ಎಲ್ಲವನ್ನೂ ಇಟ್ಟುಕೊಂಡು ಅಭಿಮಾನಿಗಳು ರಶ್ಮಿಕಾಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ಕೂಲ್ ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. ಆದರೆ, ಲವ್ ವಿಚಾರ ಮಾತ್ರ ಹಂಚಿಕೊಳ್ಳದೇ ಜಾಣತನ ಮೆರೆದಿದ್ದಾರೆ.