ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Devarakonda) ನಡುವೆ ಗಪ್ಚುಪ್ ಪ್ರೇಮಕಥನ ರಹಸ್ಯವಾಗಿ ಉಳಿದಿಲ್ಲ. ಪ್ರೀತಿ ವಿಚಾರವನ್ನು ಈ ಜೋಡಿ ಅಧಿಕೃತ ಘೋಷಿಸಿಕೊಂಡಿಲ್ಲ. ಆದರೂ ನಡವಳಿಕೆಯಲ್ಲಿ ಪ್ರೇಮಿಗಳು ಎನ್ನುವುದನ್ನು ಪದೇ-ಪದೇ ಸಾಬೀತು ಮಾಡುತ್ತಾರೆ. ಇದೀಗ ಒಟ್ಟಿಗೆ ಪ್ರಯಾಣ ಮಾಡುವ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದಾರೆ.
ಮುಂಬೈ (Mumbai) ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದಾರೆ. ಈ ವೇಳೆ ರಶ್ಮಿಕಾ ಮುಖಕ್ಕೆ ಮಾಸ್ಕ್ ಧರಿಸಿ ವಿಜಯ್ಗೂ ಮುನ್ನವೇ ಕಾರ್ನಲ್ಲಿ ಕುಳಿತಿದ್ರು. ವಿಜಯ್ ದೇವರಕೊಂಡ ಕ್ಯಾಮೆರಾ ಕಣ್ಣಿಗೆ ತಪ್ಪಿಸಿಕೊಳ್ಳುವಂತೆ ಓಡೋಡಿ ಹೋಗಿ ಬಳಿಕ ಕಾರ್ ಹತ್ತಿದ್ದಾರೆ.
View this post on Instagram
`ಕುಬೇರ’ ಚಿತ್ರದ ಬಿಡುಗಡೆಯ ಪ್ರಚಾರದಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಮುಂಬೈ, ಹೈದ್ರಾಬಾದ್ ಸೇರಿದಂತೆ ಅನೇಕ ಕಡೆ ಸುತ್ತುತ್ತಿದ್ದಾರೆ. ಈ ವೇಳೆ ರಶ್ಮಿಕಾಗೆ ವಿಜಯ್ ಕೂಡ ಸಾಥ್ ಕೊಟ್ಟಿರುವುದು ವಿಶೇಷ. ಹಲವು ಬಾರಿ ಮುಂಬೈನಲ್ಲೇ ರಶ್ಮಿಕಾ ವಿಜಯ್ ರೆಡ್ಹ್ಯಾಂಡ್ ಆಗಿಯೇ ಸಿಕ್ಕಿಬಿದ್ದಿದ್ದಾರೆ. ರೆಸ್ಟೋರೆಂಟ್ ಸುತ್ತುತ್ತಾರೆ, ಪ್ರವಾಸಕ್ಕೆ ಹೋಗುತ್ತಾರೆ. ಈ ನಡುವೆ ಪ್ರೀತಿ ವಿಚಾರದ ಪ್ರಶ್ನೆ ಎದುರಾದಾಗೆಲ್ಲ ಅಡ್ಡಗೋಡೆ ಮೇಲಿ ದೀಪವಿಟ್ಟಂತೆ ಮಾತಾಡ್ತಾರೆ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
ಇತ್ತೀಚೆಗೆ ಕುಬೇರ ಪ್ರಿರಿಲೀಸ್ ಇವೆಂಟ್ನಲ್ಲಿ ವಿಜಯ್ ಕುರಿತಾಗಿ ಕೇಳಲಾದ ಪ್ರಶ್ನೆಗೆ ರಶ್ಮಿಕಾ ಪ್ರೇಮಿ ಅನ್ನೋದು ಖಾತ್ರಿಯಾಗುವಂತೆ ಉತ್ತರ ಕೊಟ್ಟಿದ್ರು. ಅದಾದ ಕೆಲವೇ ದಿನಗಳ ಬಳಿಕ ಒಟ್ಟಿಗೆ ಕಾಣಿಸ್ಕೊಂಡು ಅನುಮಾನಕ್ಕೆ ಪುಷ್ಠಿ ಕೊಡುವಂತೆ ನಡೆದುಕೊಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಇವೆಂಟ್ನಲ್ಲಿ ನಿರೂಪಕಿ ಕೇಳಿದ್ದ ಪ್ರಶ್ನೆಗೆ ರಶ್ಮಿಕಾ ಸ್ಪೆಷಲ್ ಉತ್ತರ ಕೊಟ್ಟಿದ್ದರು. ವಿಜಯ್ ದೇವರಕೊಂಡ ಅವರಿಂದ ಏನನ್ನು ಪಡೆದುಕೊಳ್ಳಲು ಇಷ್ಟಪಡ್ತೀರಿ ಎಂಬ ಪ್ರಶ್ನೆಗೆ ರಶ್ಮಿಕಾ ವಿಜಯ್ ದೇವರಕೊಂಡ ಅವ್ರಿಂದ ಎಲ್ಲವನ್ನೂ ತೆಗೆದುಕೊಳ್ಳಲು ಇಷ್ಟ ಪಡ್ತೀನಿ ಎಂದಿದ್ದರು. ರಶ್ಮಿಕಾ ಮಾತಿನಲ್ಲಿ ಓರ್ವ ಪ್ರೇಮಿಯ ಪೊಸೆಸ್ಸಿವ್ ಕಂಡುಬಂದಿತ್ತು.