ಹೈದರಾಬಾದ್: 15ನೇ ಆವೃತ್ತಿ ಐಪಿಎಲ್ ಈಗಿಂದಲೇ ರಂಗೇರಿದೆ. ಫ್ರಾಂಚೈಸ್‍ಗಳು ಆಟಗಾರರ ಮೆಗಾ ಹರಾಜಿಗೂ ಮುನ್ನ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಸವಾಲಿನಲ್ಲಿದೆ. ಈ ನಡುವೆ ಸನ್ ರೈಸರ್ಸ್ ಹೈದರಾಬಾದ್ ತಂಡ ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್‍ರನ್ನು ರಿಟೈನ್ ಮಾಡಿಕೊಳ್ಳಲು ಇಚ್ಚಿಸಿದೆ. ಆದರೆ ರಶೀದ್ ಖಾನ್ ಮಾತ್ರ ಹೈದರಾಬಾದ್ ಫ್ರಾಂಚೈಸ್‍ನೊಂದಿಗೆ ದೊಡ್ಡ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
Advertisement
ಮೂಲಗಳ ಪ್ರಕಾರ ಸನ್ ರೈಸರ್ಸ್ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಮತ್ತು ರಶೀದ್ ಖಾನ್‍ರನ್ನು ರಿಟೈನ್ ಮಾಡಿಕೊಳ್ಳಲು ಯೋಚಿಸಿದೆ. ಆದರೆ ಈ ಬಗ್ಗೆ ರಶೀದ್ ಖಾನ್ ನನ್ನನ್ನು ರಿಟೈನ್ ಮಾಡಿಕೊಳ್ಳುವುದಾದರೆ ಮೊದಲ ಆಯ್ಕೆಯ ರಿಟೆನ್ಶನ್ ಆಗಿ ಉಳಿಸಿಕೊಳ್ಳಬೇಕೆಂದು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಫ್ರಾಂಚೈಸ್ ಕೇನ್ ವಿಲಿಯಮ್ಸನ್ ಅವರನ್ನು ಮೊದಲ ರಿಟೆನ್ಶನ್ ಆಗಿ ಉಳಿಸಿಕೊಳ್ಳಲು ಬಯಸಿದೆ. ಹಾಗಾಗಿ ರಶೀದ್ ಖಾನ್ ಬೇಡಿಕೆ ಹೈದರಾಬಾದ್ ಪಾಲಿಗೆ ಮುಳ್ಳಾಗಿದೆ. ಇದನ್ನೂ ಓದಿ: ಐಪಿಎಲ್ ಮೆಗಾ ಹರಾಜಿಗೆ ಮುನ್ನ 8 ತಂಡಗಳು ಈ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧಾರ?
Advertisement
Advertisement
ಬಿಸಿಸಿಐ ನಿಯಮದ ಪ್ರಕಾರ ರಿಟೆನ್ಶನ್ ಮಾಡುವ ಮೊದಲ ಆಟಗಾರನಿಗೆ 16 ಕೋಟಿ ರೂ., 2ನೇ ಆಟಗಾರನಿಗೆ 12 ಕೋಟಿ ರೂ., 3ನೇ ಆಟಗಾರನಿಗೆ 8 ಕೋಟಿ ರೂ., 4ನೇ ಆಟಗಾರನಿಗೆ 6 ಕೋಟಿ ರೂ. ನಿಗದಿಪಡಿಸಿದೆ. ಈ ನಿಯಮದ ಪ್ರಕಾರ ರಶೀದ್ ಖಾನ್ 16 ಕೋಟಿ ರೂ ಬೇಡಿಕೆ ಇಟ್ಟಿದ್ದಾರೆ. ಇದು ಹೈದರಾಬಾದ್ ತಂಡವನ್ನು ದಂಗುಬಡಿಸಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್
Advertisement