ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ರಶೀದ್ ಖಾನ್ 1 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಪಂದ್ಯದಲ್ಲಿ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿದ್ದರು. 4 ಓವರ್ ನಲ್ಲಿ 13 ರನ್ ನೀಡಿದ್ದರು. ಇವರ ಬಾಲಿಗೆ ರನ್ ಗಳಿಸಲು ಮುಂಬೈ ಆಟಗಾರರು ಪರದಾಡಿದ್ದರು. 24 ಎಸೆತಗಳ ಪೈಕಿ 18 ಬಾಲಿಗೆ ಯಾವುದೇ ರನ್ ಬಂದಿರಲಲ್ಲ. ರಶೀದ್ ಖಾನ್ 2 ಬೌಂಡರಿ ಮತ್ತು ಒಂದು ವೈಡ್ ಮಾತ್ರ ನೀಡಿದ್ದರು. ಪಂದ್ಯದಲ್ಲಿ ರಶೀದ್ ಖಾನ್ 3.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ರನ್ನಿಗೆ ಕಡಿವಾಣ ಹಾಕಿದ್ದರು.
Advertisement
Advertisement
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‍ಗಳಿಸಿತ್ತು. 148 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಂದ್ಯ ಗೆದ್ದಿತ್ತು. ಕೊನೆಯ ಓವರ್ ನಲ್ಲಿ 11 ರನ್ ಬೇಕಿತ್ತು. ಕಟ್ಟಿಂಗ್ ಎಸೆದ ಮೊದಲ ಎಸೆತವನ್ನು ಹೂಡ ಸಿಕ್ಸರ್ ಗೆ ಅಟ್ಟಿದ್ದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂದ ಕಾರಣ ಹೈದರಾಬಾದ್ ತಂಡ ಜಯಗಳಿಸಿತು.
Advertisement
Advertisement
ಹೈದರಾಬಾದ್ ಪರ ಸಂದೀಪ್ ಶರ್ಮಾ, ಸ್ಟ್ಯಾನ್‍ಲೇಕ್, ಕೌಲ್ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಕೀಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.
The bowler who got 18 dot balls in his 4 over spell and picked up a wicket as well. Congratulations to @rashidkhan_19 for being the Man of the Match #SRHvMI #IPL2018 pic.twitter.com/yBS0igDlVd
— SunRisers Hyderabad (@SunRisers) April 12, 2018