ಢಾಕಾ: ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ತಂಡದ ನಾಯಕರಾಗಿ ಆಯ್ಕೆಯಾಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಅಫ್ಘಾನ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ರಶೀದ್ ಖಾನ್ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಬಾಂಗ್ಲಾದ ಚಿತ್ತಗಾಂಗ್ ನಲ್ಲಿರುವ ಝಹೂರ್ ಚೌಧರಿ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 15 ವರ್ಷಗಳ ಹಿಂದೆ ಜಿಂಬಾಬ್ವೆ ತಂಡದ ತಟೇಂಡಾ ತೈಬು ನಿರ್ಮಿಸಿದ್ದ ದಾಖಲೆಯನ್ನು ರಶೀದ್ ಮುರಿದಿದ್ದಾರೆ.
Against Bangladesh today, ????????'s @rashidkhan_19 became the youngest man to lead in a Test match ????#BANvAFG pic.twitter.com/uBCOK0tzpQ
— ICC (@ICC) September 5, 2019
ತೈಬು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ಅವರಿಗೆ 20 ವರ್ಷ 358 ದಿನ ವಯಸ್ಸಾಗಿತ್ತು. ಈಗ ರಶೀದ್ ಖಾನ್ ಅವರಿಗೆ 20 ವರ್ಷ 350 ದಿನ ವಯಸ್ಸಾಗಿದೆ. ರಶೀದ್ ಖಾನ್ ತೈಬುಗಿಂತ 7 ದಿನಗಳ ಕಿಡಿಯ ನಾಯಕರಾಗಿ ದಾಖಲೆ ಬರೆದಿದ್ದಾರೆ.
ಕಿರಿಯ ಟೆಸ್ಟ್ ನಾಯಕರ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಪಟೌಡಿ ತಮ್ಮ 21 ವರ್ಷ 77 ದಿನ ವಯಸ್ಸಿನಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಉಳಿದಂತೆ ಪಾಕ್‍ನ ಯೂನಿಸ್ ಖಾನ್ 3ನೇ ಸ್ಥಾನದಲ್ಲಿದ್ದಾರೆ. 22 ವರ್ಷ 82 ದಿನ ವಯಸ್ಸಿನಲ್ಲಿ ಯೂನಿಸ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
Good luck to new Afghanistan captain @rashidkhan_19 for their one-off Test against Bangladesh starting today! ????#BlueEnergy #BANvAFG pic.twitter.com/o5RqAXAnYB
— Adelaide Strikers (@StrikersBBL) September 5, 2019