ಕಾಬೂಲ್: ಅಫ್ಘಾನ್ ಅಂತರಾಷ್ಟ್ರೀಯ ಕ್ರಿಕೆಟಿಗ ಹಾಗೂ T20ಯ ಅಫ್ಘಾನಿಸ್ತಾನದ (Afghanistan) ರಾಷ್ಟ್ರೀಯ ತಂಡದ ನಾಯಕ ರಶೀದ್ ಖಾನ್ (Rashid Khan) ಅವರು ನಡೆಸುತ್ತಿರುವ ಎನ್‍ಜಿಒ, ಹೆರಾತ್‍ನಲ್ಲಿ ಸಂಭವಿಸಿದ ಭೂಕಂಪನದಿಂದ (Earthquake) ನಲುಗಿದವರ ನೆರವಿಗೆ ನಿಂತಿದೆ. ಈ ಮೂಲಕ 83 ಲಕ್ಷ ರೂ.ಗಳನ್ನು ಸಂಗ್ರಹಿಸಿ ಸಂತ್ರಸ್ತರ ನೆರವಿಗೆ ನೀಡಲು ಮುಂದಾಗಿದೆ.
Rashid Khan Foundation is organizing an urgent fundraising campaign to aid the victims of the Herat Earthquake in Afghanistan, which occured on October 7th,2023. This devastating earthquake resulted in the loss of over 2,000 lives, caused injuries to 10,000 people, and completely…
— Rashid Khan (@rashidkhan_19) October 9, 2023
Advertisement
ಸಂತ್ರಸ್ತರಿಗೆ ಸಹಾಯ ಮಾಡಲು ರಶೀದ್ ಖಾನ್ ಫೌಂಡೇಶನ್ ತುರ್ತು ನಿಧಿಸಂಗ್ರಹ ಅಭಿಯಾನವನ್ನು ಆಯೋಜಿಸಿದೆ. ಈ ದುರಂತದಲ್ಲಿ ಬದುಕುಳಿದವರಿಗೆ ತಕ್ಷಣದ ಪರಿಹಾರ ಹಾಗೂ ಬೆಂಬಲವನ್ನು ಒದಗಿಸಲು ಈ ನಿರ್ಧಾರಕ್ಕೆ ಸಂಸ್ಥೆ ಮುಂದಾಗಿದೆ. ಇದಕ್ಕಾಗಿ ಈ ಅಭಿಯಾನದಲ್ಲಿ ಕೈ ಜೋಡಿಸುವಂತೆ ಸಂಸ್ಥೆ ಕರೆಕೊಟ್ಟಿದೆ. ಇದನ್ನೂ ಓದಿ: ಅಫ್ಘಾನ್ ಪ್ರಬಲ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 2,000ಕ್ಕೆ ಏರಿಕೆ
Advertisement
Advertisement
ಜನರು ನೀಡುವ ಸಹಾಯ ಸಹಾಯ ಸಂತ್ರಸ್ತರಿಗೆ ಸಹಾಯವಾಗಲಿದೆ. ಈ ಕಷ್ಟದ ಸಮಯದಲ್ಲಿ ಹೆರಾತ್‍ನ ಜನರ ಪರವಾಗಿ ನಾವು ಒಂದಾಗೋಣ. ಅವರಿಗೆ ನಮ್ಮ ಅಚಲ ಬೆಂಬಲವಿದೆ ಎಂದು ತೋರಿಸೋಣ ಎಂದು ರಶೀದ್ ಖಾನ್ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
Advertisement
ಅ.7 ರಂದು ಅಫ್ಘಾನಿಸ್ತಾನದ ಹೆರಾತ್ ಸಂಭವಿಸಿದ ಭೂಕಂಪ 2,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಅಲ್ಲದೇ ಇದರಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಸುಮಾರು 12 ಹಳ್ಳಿಗಳು ಸಂಪೂರ್ಣವಾಗಿ ನಾಶಗೊಂಡಿವೆ. ಇದನ್ನೂ ಓದಿ: ಪ್ಯಾಲೆಸ್ಟೈನ್ ಬೆಂಬಲಿಸಿ ನಿರ್ಣಯ ಕೈಗೊಂಡ ಕಾಂಗ್ರೆಸ್
Web Stories