ನವದೆಹಲಿ: ರಾಮರಾಜ್ಯ, ಜೈ ಶ್ರೀರಾಮ್ ಘೋಷಣೆ ಕೂಗುವವರು ರಾಕ್ಷಸರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ರಶೀದ್ ಅಲ್ವಿ, ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಎನ್ನುವುದು ನಮಗೂ ಇದೆ. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇದನ್ನೂ ಓದಿ ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ: ಓವೈಸಿ
सलमान ख़ुर्शीद के बाद अब कांग्रेस के नेता राशिद अल्वी जय श्री राम कहने वालों को निशाचर (राक्षस) बता रहे हैं।
राम भक्तों के प्रति कांग्रेस के विचारों में कितना ज़हर घुला हुआ है। pic.twitter.com/kHG3vXSpDW
— Amit Malviya (@amitmalviya) November 12, 2021
ರಾಮರಾಜ್ಯ ಇದೆ ಎಂದು ಹೇಳುತ್ತೇವೆ. ಆದರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಲ್ವಿ ಹೇಳಿಕೆಯ ವೀಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ, ಸಲ್ಮಾನ್ ಖುರ್ಷಿದ್ ನಂತರ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಜೈ ಶ್ರೀರಾಮ್ ಹೇಳುವವರನ್ನು ನಿಶಾಚರರು ಎಂದು ಕರೆಯುತ್ತಾರೆ. ಭಕ್ತರ ಬಗ್ಗೆ ಕಾಂಗ್ರೆಸ್ಸಿನ ಚಿಂತನೆಗಳಲ್ಲಿ ಎಷು ವಿಷ ಬೆರೆತಿದೆ ಎಂದು ಆಕ್ರೋಶವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೇಂಟಿಂಗ್ ಕೆಲಸಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ- ಖತರ್ನಾಕ್ ಕಳ್ಳ ಅಂದರ್!