ಬೆಂಗಳೂರು: ಸಿಲಿಕಾನ್ ಸಿಟಿ ಪ್ರದೇಶದಲ್ಲಿ ನಾಗರಹಾವು ಕಂಡಾಗ ಹೆಚ್ಚು ಮಂದಿ ಬೆಚ್ಚಿ ಬೀಳುತ್ತಾರೆ. ಆದರೆ ಇಂದು ಅತೀ ಅಪರೂಪದ ಶ್ವೇತ ನಾಗನ ಕಂಡು ಜನರು ಭಯದ ಜೊತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಂದು ಬಿಬಿಎಂಪಿ ಅರಣ್ಯ ಘಟಕಕ್ಕೆ ಎಂದಿನಂತೆ ಹಾವು ರಕ್ಷಣೆಗಾಗಿ ಕರೆ ಬಂದಿತು. ಯಲಹಂಕ ಬಾಗಲೂರು ಕ್ರಾಸ್‍ನಲ್ಲಿ ಕಂಪೌಂಡ್ ಒಳಗಿನ ಖಾಲಿ ಜಾಗದಲ್ಲಿ ಶ್ವೇತ ನಾಗ ಓಡಾಡುತ್ತಿತ್ತು. ಸ್ಥಳೀಯರು ಕರೆ ಮಾಡಿದಾಗ ಪಾಲಿಕೆ ಅರಣ್ಯ ಘಟಕದ ಸಿಬ್ಬಂದಿ ಹೋಗಿ ಹಾವನ್ನು ರಕ್ಷಿಸಿದರು.
Advertisement
Advertisement
ಈ ಬಗ್ಗೆ ಮಾತನಾಡಿದ ವನ್ಯಜೀವಿ ಸಂರಕ್ಷಕ ರಾಜೇಶ್, ಶ್ವೇತ ನಾಗ ಅಥವಾ ವೈಟ್ ಕೋಬ್ರಾ ತುಂಬಾ ವಿಭಿನ್ನವಾದ ಹಾವು. ಮೂರು ವರ್ಷದಲ್ಲಿ ಈ ರೀತಿಯ ಮೂರು ಹಾವು ಬೆಂಗಳೂರಲ್ಲಿ ರಕ್ಷಣೆ ಮಾಡಲಾಗಿದೆ. ಈ ಹಾವು ಐದು ಅಡಿ ಇದ್ದು, ಹದ್ದುಗಳಿಗೆ ಆಹಾರವಾಗದೆ ಇಷ್ಟು ಸಮಯ ಬದುಕಿರುವುದು ಬಹಳ ಅಪರೂಪ. ಹಾವಿನ ಚರ್ಮದ ಸಮಸ್ಯೆಯಿಂದ ಬಿಳಿ ಬಣ್ಣದಲ್ಲಿದೆ. ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಲಹೆ, ಗೈಡ್ ಲೈನ್ ಪ್ರಕಾರ ಅದನ್ನು ಸುರಕ್ಷಿತ ಜಾಗಕ್ಕೆ ಬಿಡುಗಡೆ ಮಾಡಲಾಗುವುದು ಎಂದರು.
Advertisement
ಇದೇ ವೇಳೆ ಉರಗ ತಜ್ಞ ನಾಗಭೂಷಣ್ ಮಾತನಾಡಿ, ಝೂ ನಲ್ಲಿ ಈ ಹಾವು ಇಡಬೇಕು ಎಂದು ಅಧಿಕಾರಿಗಳ ಸಲಹೆ ಪಡೆಯಲಾಗುತ್ತದೆ. ಈ ಹಾವು ತುಂಬಾ ಸೂಕ್ಷ್ಮವಾಗಿದೆ. ಬಿಸಿಲಿಗೆ ಚರ್ಮ, ಕಣ್ಣುಗಳ ರಕ್ಷಣೆ ಮಾಡಲು ಸುರಕ್ಷಿತ ಜಾಗದ ಅಗತ್ಯವಿದೆ ಎಂದರು.