60 ವರ್ಷದ ಕಾರು ಲೇಟೆಸ್ಟ್ ಸ್ಪೋರ್ಟ್ಸ್ ಕಾರನ್ನು ಸೋಲಿಸಿದೆ. ವಾಟ್ ಎ ಡ್ರೈವಿಂಗ್ – ಅಭಿ ಸಾಧನೆಗೆ ಎಲ್ಲೆಡೆ ಪ್ರಶಂಸೆ

Public TV
2 Min Read
ABHINANDAN

ಬೆಂಗಳೂರು: ಭಾರತ ವಿಂಗ್ ಕಮಾಂಡರ್ ಅಭಿನಂದನ್ ಅವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬೀಳುವ ಮುನ್ನ ಅತ್ಯುತ್ತಮ ಸಾಧನೆ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಹೌದು. ಅಭಿನಂದನ್ ಅವರು ಹಾರಿಸುತ್ತಿದ್ದ ವಿಮಾನ ರಷ್ಯಾ ನಿರ್ಮಿತ ಮಿಗ್ 21 ಬೈಸನ್. ಎಫ್ 16ಗೆ ಹೋಲಿಕೆ ಮಾಡಿದರೆ ಇದರ ಸಾಮಥ್ರ್ಯ ತುಂಬಾ ಕಡಿಮೆ. ಅಮೆರಿಕದ ಜನರಲ್ ಡೈನಾಮಿಕ್ಸ್ ಲಾಕ್ ಹಿಡ್ ಮಾರ್ಟಿನ್ ಕಂಪನಿ ಎಫ್ 16 ಫೈಟಿಂಗ್ ಫಾಲ್ಕನ್ 1974 ರಲ್ಲಿ ತಯಾರಿಸಿದ್ದು ಸದ್ಯ ಜಗತ್ತಿನ ಅತ್ಯುತ್ತಮ ವಿಮಾನಗಳ ಪೈಕಿ ಒಂದಾಗಿದೆ.

mig 21

ಆದರೆ ರಷ್ಯಾದ ಮಿಕೋಯಾನ್ ಗುರೇವಿಚ್(ಮಿಗ್) 21 ಬೈಸನ್ 1959 ರಲ್ಲಿ ತಯಾರಾಗಿದ್ದು, 1963 ರಲ್ಲಿ ಮಿಗ್ 21 ವಿವಿಧ ಆವೃತ್ತಿ ಒಟ್ಟ 874 ವಿಮಾನಗಳು ಭಾರತದ ವಾಯುಸೇನೆಗೆ ಸೇರ್ಪಡೆಯಾಗಿತ್ತು. 1971 ರಲ್ಲಿ ಬಾಂಗ್ಲಾ ಕದನದ ವೇಳೆ ಪ್ರಮುಖ ಪಾತ್ರವಾಹಿಸಿದ್ದ ಮಿಗ್ ಪಾಕಿಸ್ತಾನ 9 ವಿಮಾನಗಳನ್ನು ಹೊಡೆದು ಹಾಕಿತ್ತು. ಉಳಿದ ಯುದ್ಧ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನಗಳ ಸಾಮರ್ಥ್ಯ ಕಡಿಮೆ ಎಂದು ಗೊತ್ತಾದ ಬಳಿಕ 1990 ರಲ್ಲಿ ಇವುಗಳನ್ನು ಮೇಲ್ದರ್ಜೆಗೆ ಏರಿಸಲಾಗಿತ್ತು. ಸದ್ಯ ಭಾರತದಲ್ಲಿ 122 ಮಿಗ್ ವಿಮಾನಗಳಿವೆ. ಖರೀದಿಸಿದ ಪೈಕಿ 500ಕ್ಕೂ ಹೆಚ್ಚು ವಿಮಾನಗಳು ಪತನಗೊಂಡಿದೆ. ಹೀಗಾಗಿ ವಾಯುಪಡೆಯಲ್ಲಿ ಈ ವಿಮಾನಗಳು ಹಾರುವ ಶವಪೆಟ್ಟಿಗೆ ಎಂದೇ ಕುಖ್ಯಾತಿ ಪಡೆದಿವೆ. ಹಾರುವ ಶವಪೆಟ್ಟಿಗೆ ಎಂಬ ಕುಖ್ಯಾತಿ, ಎಫ್ 16 ಮುಂದೆ ಏನು ಅಲ್ಲ ಎಂದು ಭಾವಿಸಿದ್ದರೂ ಅಭಿನಂದನ್ ಈ ವಿಮಾನ ಮೂಲಕವೇ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿ ಒಂದು ವಿಮಾನವನ್ನು ಉರುಳಿಸಿ ಈಗ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

pakistan f 16

ಜನ ಹೇಳೋದು ಏನು?
– “1960ಕ್ಕೆ ಸೇರಿದ ಎರಡನೇ ತಲೆಮಾರಿನ ಯುದ್ಧವಿಮಾನವೊಂದು 5ನೇ ತಲೆಮಾರಿನ ಅಮೆರಿಕ ನಿರ್ಮಿತ ವಿಮಾನವನ್ನು ಹೊಡೆದಿದೆ ಎಂದು ನಂಬುವುದೇ ಅಸಾಧ್ಯ. ಭಾರತೀಯ ವಾಯುಸೇನೆ ಜಗತ್ತಿನಲ್ಲೇ ಶ್ರೇಷ್ಠ ವಾಯುಸೇನೆಯಾಗಿದೆ”.
– “ಮಿಗ್ ವಿಮಾನವೊಂದು ಎಫ್ 16 ಹೊಡೆದಿದ್ದು ವಿಶ್ವದಲ್ಲೇ ಮೊದಲು. ಈ ರೀತಿಯ ಸೈನಿಕರನ್ನು ಪಡೆದಿರುವ ಭಾರತ ನಿಜವಾಗಿ ಗ್ರೇಟ್”

mig 21 1

– “ಗಾಡಿ ಹೊಸದೇ ಇರಲಿ ಹಳೆಯದೇ ಇರಲಿ. ಅದನ್ನು ಓಡಿಸುವ ವ್ಯಕ್ತಿಯೇ ಮುಖ್ಯ. ಭಾರತೀಯರಿಗೆ ಸರಿಯಾಗಿ ತರಬೇತಿ ನೀಡಿದರೆ ಏನು ಬೇಕಾದರೂ ಮಾಡುವ ಸಾಮಥ್ರ್ಯ ಹೊಂದಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತದೆ. ವೆಲ್‍ಡನ್ ಅಭಿ”
-“ಹಳೆಯ ಸ್ಕೂಟರ್ ಈಗಿನ ಲೇಟೆಸ್ಟ್ 200 ಎನ್‍ಎಸ್ ಎಬಿಎಸ್ ಹೊಂದಿರುವ ಬೈಕನ್ನು ರೇಸಿನಲ್ಲಿ ಸೋಲಿಸಿದಂತೆ ನಮ್ಮ ಹಳೇಯ ವಿಮಾನ ಪಾಕಿಸ್ತಾನ ಎಫ್ 16 ವಿಮಾನವನ್ನು ಸೋಲಿಸಿದೆ”.

indian sir force

– “ಶವಪೆಟ್ಟಿಗೆಯಲ್ಲೇ ನಮ್ಮ ಪೈಲಟ್‍ಗಳು ಈ ಸಾಹಸ ಮಾಡಿದ್ದಾರೆ. ಒಂದು ವೇಳೆ ರಫೇಲ್ ಸಿಕ್ಕಿದ್ದರೆ?”
– “ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಮತ್ತು ರಷ್ಯಾ ಯುದ್ಧ ಮಾಡುವುದಿಲ್ಲ. ಆದರೆ ಭಾರತ ರಷ್ಯಾ ನಿರ್ಮಿತ ಮಿಗ್ ಬಳಸಿ ಎಫ್ 16 ವಿಮಾನವನ್ನು ಹೊಡೆಯುವ ಮೂಲಕ ಅಮೆರಿಕವನ್ನು ಸೋಲಿಸಿದೆ. ಈ ಸಂತೋಷಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನರೇಂದ್ರ ಮೋದಿ ಕರೆ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ”

MIG

– “60 ವರ್ಷದ ಹಳೆಯ ಕಾರು ಲೇಟೆಸ್ಟ್ ಸ್ಪೋರ್ಟ್ಸ್ ಕಾರನ್ನು ಸೋಲಿಸಿದೆ. ವಾಟ್ ಎ ಡ್ರೈವಿಂಗ್ ಅಭಿ”
– “ಭಾರತೀಯ ವಾಯುಸೇನೆಯ ಈ ಸಾಹಸ ಭವಿಷ್ಯದಲ್ಲಿ ಎಲ್ಲ ದೇಶಗಳ ವಾಯು ಸೈನಿಕರಿಗೆ ಪಠ್ಯವಾಗಲಿದೆ”

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article