ಕಾರವಾರ: ದುರಂತಕ್ಕೀಡಾಗಿ ಇಬ್ಬರನ್ನು ಬಲಿ ತೆಗೆದುಕೊಂಡು ಸಮುದ್ರದಿಂದ ಮೇಲೆತ್ತಲಾಗದೇ ಅರ್ಧ ಭಾಗವನ್ನು ಬಿಟ್ಟು ಹೋಗಿದ್ದ ಹಡಗು ಈಗ ಕಾರವಾರದ ಲೈಟ್ ಹೌಸ್ ನಲ್ಲಿ ಪತ್ತೆಯಾಗಿದೆ.
ಸಮುದ್ರದಲ್ಲಿ ಎದ್ದ ಬಿರುಗಾಳಿಗೆ 2003ರಲ್ಲಿ ಓಷನ್ ಇರಾನಿ ಹೆಸರಿನ ಕಚ್ಚಾ ತೈಲ ಹಡಗು ಕಾರವಾರದ ಬಂದರಿಗೆ ಬರುವ ವೇಳೆ ಇಲ್ಲಿನ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ದ್ವೀಪದ ಕಲ್ಲುಬಂಡೆಗೆ ಅಪ್ಪಳಿಸಿ ಸಮುದ್ರದಲ್ಲಿ ಮುಳುಗಿತ್ತು.
Advertisement
Advertisement
ಈ ವೇಳೆ ಹದಿನೈದು ಜನರನ್ನು ರಕ್ಷಿಸಿದ್ದು ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ನಂತರ ಹಡಗಿನ ಅರ್ಧ ಭಾಗವನ್ನು ತುಂಡರಿಸಿ ಉಳಿದ ಭಾಗವನ್ನು ಮೇಲೆತ್ತಲಾಗದೆ ಅಲ್ಲಿಯೇ ಬಿಡಲಾಗಿತ್ತು. ಈಗ ಈ ಹಡಗಿನ ಅವಶೇಷಗಳಲ್ಲಿ ಬಲು ಅಪರೂಪದ ಹವಳದ ದಿಬ್ಬಗಳು ಬೆಳೆದಿದ್ದು ಕೋಟಿ ಕೋಟಿಗೆ ಬೆಲೆ ಬಾಳುತ್ತಿದೆ. ಹೀಗಾಗಿ ಇದೀಗ ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
Advertisement
ಇಂದು ಲೈಟ್ ಹೌಸ್ ಬಳಿ ನೇತ್ರಾಣಿ ಅಡ್ವೆಂಚರ್ ನ ಸಿಬ್ಬಂದಿ ಸ್ಕೂಬಾ ಡೈ ಮಾಡಿದಾಗ ಈ ಹಡಗು ಹಾಗೂ ಹವಳದ ದಿಬ್ಬ ಪತ್ತೆಯಾಗಿದ್ದು ಜನರನ್ನು ಸೆಳೆಯುತ್ತಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv