ಚಿಕ್ಕಮಗಳೂರು: ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಮುತ್ತೋಡಿ ಅರಣ್ಯದಲ್ಲಿ ನೀಲ್ ಗಾಯ್ ಕಾಣಿಸಿಕೊಂಡಿತ್ತು. ಇದೀಗ ಹುಲಿ ದಾಳಿಗೆ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ. 20 ವರ್ಷದ ಬಳಿಕ ಕಳೆದ ವರ್ಷ ಮುತ್ತೋಡಿಯಲ್ಲಿ ಕಾಣಿಸಿಕೊಂಡಿತ್ತು.
Advertisement
ಈ ಪ್ರಾಣಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾಣಸಿಗುತ್ತಿದ್ದು, ಕಡವೆ ಜಾತಿಗೆ ಸೇರಿದ ಅತಿ ಭಯಪಡುವ ಪ್ರಾಣಿಯಾಗಿದೆ. ಸದ್ಯ ಸಾವನ್ನಪ್ಪಿದ ನೀಲ್ ಗಾಯ್ ಇದ್ದ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಬ್ಲೂ ಬುಲ್ ಅಂತಲೂ ಕರೆಯುತ್ತಾರೆ.
Advertisement
Advertisement
ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರವಾಸಿಗರು ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ವೇಳೆ ಈ ಅಪರೂಪದ ಬ್ಲೂ ಬುಲ್ ಪ್ರಾಣಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭದ್ರಾ ಮುತ್ತೋಡಿ ಅರಣ್ಯದಲ್ಲಿ ಈ ಹಿಂದೆ ಯಾವತ್ತೂ ಬ್ಲೂ ಬುಲ್ ಪ್ರಾಣಿ ಕಂಡಿರಲಿಲ್ಲ. ಈ ಪ್ರಾಣಿ ಇರುವ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಕೇವಲ ಹುಲ್ಲುಗಾವಲಲ್ಲಿ ವಾಸಿಸುವ ಪ್ರಾಣಿ ಇದಾಗಿದ್ದು, ಯಾರೋ ತಂದು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.
Advertisement
1950 ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಈ ಪ್ರಾಣಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮಾತ್ರ ಹೆಚ್ಚಾಗಿವೆ ಕಂಡುಬರುತ್ತದೆ. ಇದನ್ನ ನೀಲ್ ಗಾಯ್ ಎಂತಲೂ ಕರೆಯುತ್ತಾರೆ. ಹುಲಿ ಹಾಗೂ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ಕಣ್ಣಿಗೆ ಬಿದ್ದರೆ ಇದನ್ನ ಸುಲಭವಾಗಿ ಬೇಟೆ ಆಡುತ್ತವೆ. ಈ ಪ್ರಾಣಿ ಕಾಡಿನೊಳಗೆ ಬಹಳ ದಿನ ಬದುಕುವುದು ಕಷ್ಟ. ಆದ್ದರಿಂದ ಕೂಡಲೇ ಇದನ್ನ ಪತ್ತೆ ಮಾಡಿ ರಕ್ಷಣೆ ಮಾಡಿ ಎಂದು ಅರಣ್ಯ ಸಿಬ್ಬಂದಿಗೆ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್ ಸೂಚನೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews