ಅಪರೂಪದ ಬ್ಲ್ಯಾಕ್ ಟೈಗರ್ ಪತ್ತೆ – ವೀಡಿಯೋ ಕಂಡು ಬೆರಗಾದ ನೆಟ್ಟಿಗರು

Public TV
2 Min Read
BLACK TIGER

ಭುವನೇಶ್ವರ್: ದೇಶದಲ್ಲಿ ರೋಚಕತೆಯಿಂದ ಕೂಡಿದ ರಾಷ್ಟ್ರೀಯ ಉದ್ಯಾನಗಳಿವೆ. ಸಾಕಷ್ಟು ಜೀವಿಗಳಿಗೆ ಈ ಅಭಯಾರಣ್ಯಗಳು ನೆಲೆಯಾಗಿವೆ. ಪ್ರಕೃತಿ ಪ್ರಿಯರಿಗೆ, ವನ್ಯಜೀವಿ ಪ್ರೇಮಿಗಳಿಗೆ ಇಂತಹ ತಾಣ ಸಹಜವಾಗಿಯೇ ಖುಷಿ ನೀಡುತ್ತದೆ, ಉಲ್ಲಾಸವನ್ನು ಹೆಚ್ಚು ಮಾಡುತ್ತದೆ. ಹುಲಿ, ಸಿಂಹಗಳ ಗಾಂಭೀರ್ಯದ ನೋಟ, ಕೋತಿಗಳ ತುಂಟಾಟ… ಹೀಗೆ ಕಣ್ಣಿಗೆ ರಸದೌತಣ ನೀಡುವಂತಹ ದೃಶ್ಯಗಳಿಗೆ ರಾಷ್ಟ್ರೀಯ ಉದ್ಯಾನವನದಲ್ಲಿ ಕೊರತೆ ಇಲ್ಲ. ಇಂತಹ ಅಪೂರ್ವ ತಾಣಗಳಲ್ಲಿ ಅಪರೂಪದ ಪ್ರಾಣಿಗಳು ಆಗಾಗ್ಗೆ ಕಣ್ಣಿಗೆ ಗೋಚರವಾಗುತ್ತಿರುತ್ತವೆ.

BLACK TIGER 1

ಹೌದು.. ವನ್ಯ ಸಂಕುಲದಲ್ಲಿ ಹುಲಿ ಹೆಗ್ಗುರುತು. ಕಾಡಿಗೆ ಮಳೆ ಎಷ್ಟು ಮುಖ್ಯವೋ, ಕಾಡಿಗೆ ಹುಲಿಯು ಅಷ್ಟೇ ಮುಖ್ಯ. ಅನೇಕ ಕಾಡುಗಳಲ್ಲಿ ಕಂಡು ಬರುವ ಹುಲಿಗಳು ಸಹಜವಾಗಿ ಕೇಸರಿ ಬಣ್ಣದ, ಗಾಂಭೀರ್ಯದ ನೋಟದೊಂದಿಗೆ ನೋಡುಗರ ಕಣ್ಮನ ಸೆಳೆಯುತ್ತವೆ. ಈ ನಡುವೆ ಅಪರೂಪ ಎಂಬಂತೆ ಬಿಳಿ ಹುಲಿಗಳು ಇವೆ. ಇದನ್ನೂ ಓದಿ: ದುಬಾರಿ ಬೆಲೆಗೆ ತಮ್ಮ ಫ್ಲ್ಯಾಟ್ ಮಾರಿದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

ಇಷ್ಟು ದಿನ ಕರಿ ಚಿರತೆಯಷ್ಟೇ ಕಣ್ಣಿಗೆ ಹಬ್ಬ ನೀಡುತ್ತಿದ್ದ ವನ್ಯ ಪ್ರಿಯರಿಗೆ ಮತ್ತೊಂದು ಸಂತೋಷದ ಸುದ್ದಿ ಸಿಕ್ಕಂತಾಗಿದೆ. ಅಪರೂಪದಲ್ಲೇ ಅಪರೂಪವಾದ ಕಪ್ಪು ಹುಲಿ (ಬ್ಲ್ಯಾಕ್ ಟೈಗರ್) ಭಾರತದ ಒಡಿಶಾದ ಕಾಡಿನಲ್ಲಿ ಪತ್ತೆಯಾಗಿದೆ. ಇದು ಕಾಡಿನಲ್ಲಿ ಸಫಾರಿಗೆ ಹೋದವರ ಕಣ್ಣಿಗೆ ಕಾಣುವುದು ಕೂಡ ವಿರಳಾತಿವಿರಳ ಎಂದು ವರದಿಯಾಗಿದೆ.

TIGER 3 1

ಇದೀಗ ಈ ಕಪ್ಪು ಹುಲಿ ಕಾಡಿನಲ್ಲಿಟ್ಟಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿರಿಯ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹುಲಿ ದಿನದ ಪ್ರಯುಕ್ತ (ಜು.29) ಸೆರೆ ಹಿಡಿದಿದ್ದ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗಡಿ ಭಾಗದ ಸರ್ಕಾರಿ ಶಾಲೆಯಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆ- ಬೆಳಗಾವಿ ಜಿಲ್ಲೆಯಲ್ಲಿ ಆತಂಕ

ಒಡಿಶಾದ `ಸಿಮ್ಲಿಪಾಲ್ ನ್ಯಾಷನಲ್ ಪಾರ್ಕ್’ನಲ್ಲಿ ಈ ಕಪ್ಪು ಹುಲಿಯ ಚಲನವಲನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕಪ್ಪು ಹುಲಿ ಪರಚುತ್ತಾ ಗಿಡ ಹತ್ತಲು ವಿಫಲ ಯತ್ನ ನಡೆಸುತ್ತದೆ. ಇಂತಹ ಅಪರೂಪದ ವೀಡಿಯೋ ಶೇರ್ ಮಾಡಿಕೊಂಡಿದ್ದಕ್ಕೆ ಅಧಿಕಾರಿಗೆ ವನ್ಯಜೀವಿ ಪ್ರಿಯರು ಧನ್ಯವಾದ ಸಲ್ಲಿಸಿದ್ದಾರೆ.

2007ರಲ್ಲೇ ಈ ಕಪ್ಪು ಹುಲಿಯನ್ನು ಒಡಿಶಾದಲ್ಲಿ ಗುರುತಿಸಲಾಗಿತ್ತು. ಅಸಲಿಗೆ ಕಪ್ಪು ಹುಲಿ ಎನ್ನುವುದು ಇರುವುದಿಲ್ಲ. ಬದಲಿಗೆ ಅದರ ಆನುವಂಶಿಕ ಬೆಳವಣಿಗೆ ಆಧಾರದ ಮೇಲೆ ಚರ್ಮದ ಬಣ್ಣದಲ್ಲಿ ವ್ಯತ್ಯಾಸವಾಗಿರುತ್ತದೆ ಎಂಬುದಾಗಿ ವರದಿಯಾಗಿದೆ.

Live Tv

[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *