ಸಿಧು ಮೂಸೆವಾಲಾ ಮಾದರಿಯಲ್ಲೇ ಹತ್ಯೆ ಮಾಡುವುದಾಗಿ ಹನಿ ಸಿಂಗ್‌ಗೆ ಕೊಲೆ ಬೆದರಿಕೆ

Public TV
1 Min Read
honey singh

ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್‌ಗೆ(Honey Singh) ಸಂಕಷ್ಟವೊಂದು ಎದುರಾಗಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಂಡು ಗಾಯಕ ಹನಿ ಸಿಂಗ್‌ಗೆ ಬೆದರಿಕೆ ಹಾಕಿದ್ದಾನೆ. ರಕ್ಷಣೆಗಾಗಿ ಹನಿ ಸಿಂಗ್, ದೆಹಲಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ. ಇದನ್ನೂ ಓದಿ:‘ಕಾಂತಾರ’ 2ಗಾಗಿ ಕುದುರೆ ಸವಾರಿ, ಕಳರಿ ಪಯಟ್ಟು ಕಲಿಕೆಯಲ್ಲಿ ರಿಷಬ್ ಶೆಟ್ಟಿ ಬ್ಯುಸಿ

honey singh 2

ಬಾಲಿವುಡ್‌ನಲ್ಲಿ (Bollywood) ಸಾಕಷ್ಟು ಆಲ್ಬಂ ಸಾಂಗ್‌ಗಳಲ್ಲಿ ಹನಿ ಸಿಂಗ್ ಮಿಂಚಿದ್ದಾರೆ. ತಮ್ಮ ಕಂಪೋಸ್‌ನಲ್ಲಿ ಬಿಗ್ ಸ್ಟಾರ್‌ಗಳಿಗೆ ಧ್ವನಿ ನೀಡಿದ್ದಾರೆ. ಮ್ಯೂಸಿಕ್ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸಾಧನೆ ಮಾಡಿರುವ ಹನಿ ಸಿಂಗ್‌ಗೆ ಕೊಲೆ ಬೆದರಿಕೆ ಎದುರಾಗಿದೆ. ಗೋಲ್ಡಿ ಬ್ರಾರ್ ಕುಖ್ಯಾತ ಗ್ಯಾಂಗ್‌ಸ್ಟರ್‌ 2022ರ ಖ್ಯಾತ ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ರೂವಾರಿಯಾಗಿದ್ದಾರೆ.

honey singh 1

ಕೆನಡಾದಲ್ಲಿ ಇದ್ದುಕೊಂಡೆ ಯೋಜನೆಗಳನ್ನ ಗೋಲ್ಡಿ ಬ್ರಾರ್ ಪ್ಲ್ಯಾನ್ ಮಾಡುತ್ತಾರೆ. ಈಗ ಸಿಧು ಮೂಸೆವಾಲಾ ಹತ್ಯೆ ಮಾದರಿಯಲ್ಲೇ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಗೋಲ್ಡಿ ಬ್ರಾರ್ (Goldy Brar) ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ ನೇರವಾಗಿ ಹನಿ ಸಿಂಗ್‌ಗೆ ಕರೆ ಮಾಡಲಿಲ್ಲ. ಬದಲಾಗಿ ಹನಿ ಸಿಂಗ್ ಮ್ಯಾನೇಜರ್‌ಗೆ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಪದೇ ಪದೇ ಮ್ಯಾನೇಜರ್‌ಗೆ ಕರೆ, ಮೆಸೇಜ್ ಬಂದ ಕಾರಣ ಇದೀಗ ಕೊಲೆ ಬೆದರಿಕೆ ಬಗ್ಗೆ ದೆಹಲಿ ಪೊಲೀಸ್ ಠಾಣೆಗೆ ದೂರ ದಾಖಲಿಸಿದ್ದಾರೆ.‌

ದೂರಿನ ಬಳಿಕ ಮಾಧ್ಯಮಕ್ಕೆ ಹನಿ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲೇ ಹೋಗಲಿ ಜನರಿಂದ ಬರೀ ಪ್ರೀತಿಯನ್ನೇ ಪಡೆದಿದ್ದೇನೆ. ನನಗೆ ಯಾರೊಂದಿಗೂ ಶತ್ರುತ್ವವಿಲ್ಲ. ಇದೇ ಮೊದಲ ಬಾರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಹನಿ ಸಿಂಗ್ ಮಾತನಾಡಿದ್ದಾರೆ.

Share This Article