ಬೆಂಗಳೂರು: ಕನ್ನಡ ರ್ಯಾಪರ್ ಎಂದೇ ಖ್ಯಾತಿ ಪಡೆದಿರುವ ಚಂದನ್ ಶೆಟ್ಟಿ ಬಿಗ್ಬಾಸ್ ಶೋ ಗೆದ್ದು ಹೊರಗೆ ಬಂದ ನಂತರ ಮೊದಲು ಪಡ್ಡೆಹುಲಿ ಚಿತ್ರದ ಪ್ರೋಮೊ ಹಾಡನ್ನು ಹಾಡಿದ್ದಾರೆ.
ಪಡ್ಡೆಹುಲಿ ಚಿತ್ರಕ್ಕೆ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹುಟ್ಟಿಸಿರುವ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುತ್ತಿದ್ದು, ಸದ್ಯ ಈ ಚಿತ್ರದ ಪ್ರೋಮೊ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಇದನ್ನೂ ಓದಿ: ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!
Advertisement
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕೆ.ಮಂಜು ಅವರ ಮಗ ಶ್ರೇಯಸ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಒಬ್ಬ ನಾಯಕನನ್ನು ಪರಿಚಯಿಸಲು 45 ರಿಂದ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಪ್ರೋಮೊ ಶೂಟ್ ಮಾಡಲಾಗಿದೆ.
Advertisement
Advertisement
ಈ ಹಿಂದೆ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವಿಟ್ಟರ್ ಮೂಲಕ ಅನಾವರಣಗೊಳಿಸಿದರು. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಎಂದು ಸುದೀಪ್ ಶುಭ ಹಾರೈಸಿದ್ದರು. ಇದನ್ನೂ ಓದಿ: ಪಡ್ಡೆ ಹುಲಿ ಹುಡುಗಿ ನಿಶ್ವಿಕಾ
Advertisement
ಇತ್ತೀಚಿಗಷ್ಟೇ ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಕೆ. ಮಂಜು ಮಗ ಈಗ ‘ಪಡ್ಡೆ ಹುಲಿ’
ಮುಹೂರ್ತ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದರು. ಇದನ್ನೂ ಓದಿ: ‘ಪಡ್ಡೆಹುಲಿ’ಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ!
ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾಗಿದ್ದರು.