ಬೆಂಗಳೂರು: ವಿಚಾರಣೆ ವೇಳೆ ಸಿಸಿಬಿ ಪೊಲೀಸರ ಮುಂದೆ ರ‍್ಯಾಪರ್ ಚಂದನ್ ಶೆಟ್ಟಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ `ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ್ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ. ನಾನು ಕೇವಲ ಹಾಡನ್ನು ಹಾಡಿದ್ದನ್ನೇ, ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
Advertisement
ಮೂರು ವರ್ಷಗಳ ಹಿಂದೆ ಅಂತ್ಯ ಚಿತ್ರಕ್ಕೆ ಹಾಡು ಹಾಡಿದೆ. ಆದರೆ ಕಾರಣಾಂತರದಿಂದ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆದರೆ ಈ ಹಾಡು ಲೀಕ್ ಆಗಿತ್ತು. ಹೀಗಾಗಿ ಚಿತ್ರದ ನಿರ್ದೇಶಕರು ಈ ಹಾಡನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡುವುದು ಅನಿವಾರ್ಯವಾಗಿತ್ತು ಎಂದು ಚಂದನ್ ಶೆಟ್ಟಿ ವಿಚಾರಣೆ ವೇಳೆ ಸಿಸಿಬಿ ಪೊಲೀಸರಿಗೆ ಹೇಳಿದ್ದಾರೆ.
Advertisement
Advertisement
ವಿಚಾರಣೆ ವೇಳೆ ಚಂದನ್ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಗಾಂಜಾ ನೋಡಿ ಯುವಜನತೆ ಅದರತ್ತ ಸೆಳೆಯುತ್ತಾರೆ ಅಂದರೆ ಭಾರತದಲ್ಲಿ ಕೊಲೆ, ದರೋಡೆ ಹಾಗೂ ರೇಪ್ ಮಾಡುವುದು ಕೂಡ ಒಂದು ಕೃತ್ಯವಾಗಿದೆ. ನೀವು ಇದನ್ನು ಕೂಡ ಬ್ಯಾನ್ ಮಾಡಬೇಕು. ಯುವಜನತೆ ಇದರಿಂದಲೂ ಸೆಳೆಯುತ್ತಾರೆ. ಸಿನಿಮಾಗಳಲ್ಲಿ ಕೊಲೆ, ದರೋಡೆ ಹಾಗೂ ರೇಪ್ ಕೇವಲ ಮನರಂಜನೆಗೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಗಾಂಜಾ ಹಾಡಿಗೆ ಮಾತ್ರ ಅವರು ಹೇಗೆ ಆಕರ್ಷಕರಾಗುತ್ತಾರೆ ಎಂದು ಚಂದನ್ ಸಿಸಿಬಿ ಪೊಲೀಸರಿಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
Advertisement
ಸ್ಯಾಂಡಲ್‍ವುಡ್‍ನಲ್ಲಿ ನನಗೆ ದೊಡ್ಡ ಯಶಸ್ಸು ಬೇಕೆಂದುಕೊಂಡಿದೆ ಹಾಗೂ ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ ಇತ್ತು. ಆ ವೇಳೆ ನಿರ್ದೇಶಕರು ಸ್ಕ್ರಿಪ್ಟ್ ನೀಡಿ ಚಿತ್ರಕ್ಕೆ ಹಾಡು ಹಾಡಲು ಹೇಳಿದ್ದರು. ಆ ಹಾಡು ಯುವಕರಿಗೆ ಒಂದು ಒಳ್ಳೆಯ ಸಂದೇಶ ಸಾರುವ ಹಾಡಾಗಿತ್ತು. ಗಾಂಜಾದಿಂದ ಆಗುವ ಅನಾಹುತಗಳು ಆ ಚಿತ್ರದಲ್ಲಿ ತೋರಿಸಲಾಗಿತ್ತು. ಹಾಗಾಗಿ ನಾನು ಆ ಹಾಡನ್ನು ಕೇವಲ 5,000 ರೂ. ಪಡೆದು ಹಾಡಿದೆ. ಮೂರು ಶತಮಾನಗಳ ಹಿಂದೆ ಶಿಶುನಾಳ ಶರೀಫ್ ಗಾಂಜಾ ಬಗ್ಗೆ ಹಾಡು ಬರೆದಿದ್ದರು. ಆ ಹಾಡು ಈಗಲೂ ಜನಪ್ರಿಯವಾಗಿದೆ. ಆದರೆ ಆ ಹಾಡಿನ ಬಗ್ಗೆ ಯಾರಿಗೂ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಯಾರೂ ಆ ಹಾಡಿನ ವಿರುದ್ಧ ದೂರು ಕೂಡ ದಾಖಲಿಸಿಲ್ಲ ಎಂದು ಚಂದನ್ ಸಿಸಿಬಿ ಪೊಲೀಸರಿಗೆ ಹೇಳಿದ್ದರು.
ಏನಿದು ಪ್ರಕರಣ?
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv