Bengaluru CityCinemaDistrictsKarnatakaLatestSandalwood

5 ಹಾಡಿಗೆ ಚಂದನ್ ಶೆಟ್ಟಿಗೆ ಸಿಕ್ತು ಊಹಿಸಲಾಗದಷ್ಟು ಸಂಭಾವನೆ

ಬೆಂಗಳೂರು: ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಅವರು ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಯಾರೂ ಊಹಿಸಲಾಗದಷ್ಟು ಸಂಭಾವನೆ ಪಡೆದಿದ್ದಾರೆ.

ಚಂದನ್ ಶೆಟ್ಟಿ ಅವರಿಗೆ ಒಳ್ಳೆಯ ಪ್ರಾಜೆಕ್ಟ್ ಸಿಕ್ಕಿದೆ. ಚಂದನ್ ಅವರು ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗಾಗಿ 5 ಹಾಡನ್ನು ಹಾಡಲಿದ್ದಾರೆ.

ಸದ್ಯ ಚಂದನ್ 5 ವಿಭಿನ್ನ ಹಾಡುಗಳನ್ನು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 6 ತಿಂಗಳಲ್ಲಿ ಈ ಕೆಲಸ ಮುಗಿಸಿ ಪ್ರೇಕ್ಷಕರ ಮುಂದೆ ಹಾಡುಗಳನ್ನು ತರುವುದಕ್ಕೆ ಅವರು ಪ್ಲಾನ್ ಮಾಡಿದ್ದಾರೆ. ಒಂದು ಆಲ್ಬಂ ಹಾಡಿಗೆ ಅತಿ ದೊಡ್ಡ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮದುವೆ ಇಂಗಿತ ಬಿಚ್ಚಿಟ್ಟ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ

ಈ ಬಗ್ಗೆ ಚಂದನ್ ಶೆಟ್ಟಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನೂರು ರೂ. ಸಿಕ್ಕರೆ ಸಾಕು ಒಂದು ದಿನ ಹೊಟ್ಟೆ ತುಂಬಿ ಹೋಗುತ್ತೆ ಎಂಬ ದಿನ ಇತ್ತು. ಆದರೆ ಈಗ ಅದೇ ಮನುಷ್ಯನಿಗೆ 1 ಕೋಟಿ ರೂ. ಸಿಕ್ಕಿದೆ ಎಂದರೆ ಅದರ ಆನಂದವೇ ಬೇರೆ. ಅದು ಹೇಳಿಕೊಳ್ಳೋಕೆ ಸಾಧ್ಯವಿಲ್ಲ. ಜೀವನದಲ್ಲಿ ಏನೋ ಒಂದು ಸಾರ್ಥಕತೆ ಸಿಕ್ಕಿದ ರೀತಿ ಅನಿಸುತ್ತಿದೆ. ನನ್ನ ಮಗ ಏನೋ ಸಾಧಿಸುತ್ತಾನೆ ಎಂದು ನನ್ನ ತಂದೆ-ತಾಯಿ ನಂಬಿದ್ದರು. ಇದೀಗ ತಮ್ಮ ಮಗ ಈ ಮಟ್ಟಕ್ಕೆ ಸಾಧನೆ ಮಾಡಿದ್ದಾನೆಂದು ನನ್ನ ತಂದೆ-ತಾಯಿಗೆ ಖುಷಿ ಇದೆ” ಎಂದರು.

ಕೇವಲ ಹಾಡು ಮಾಡಿಕೊಂಡು ಜೀವನ ಮಾಡಬಹುದಾ ಎಂಬ ಪ್ರಶ್ನೆ ಇತ್ತು. ಈಗ ಜೀವನ ಅಲ್ಲ ರಾಯಲ್ ಜೀವನ ಮಾಡಬಹುದು ಎಂಬುದು ಪ್ರೂವ್ ಆಗುತ್ತಿದೆ. ಅವಕಾಶ ನೀಡಿದ ಲಹರಿ ಕಂಪನಿಗೆ ಧನ್ಯವಾದ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button