ಮುಂಬೈ: ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಮಹಾರಾಷ್ಟ್ರದ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ಸ್(ಪೆಟಾ) ಸಹಕಾರದಿಂದ ವಿಜಯ್ ರಂಗರೆ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ನವ ಮುಂಬೈನ ಖರಗರ್‍ನಲ್ಲಿ ಹೆಣ್ಣು ನಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಆಗಸ್ಟ್ 22 ರಂದು ನವ ಮುಂಬೈ ಹಾಗೂ ಪನ್ವೆಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Advertisement
ಆರೋಪಿ ಈ ಹಿಂದೆಯೂ ಇತರ ಪ್ರಾಣಿಗಳಿಗೆ ಲೈಂಗಿಕ ಕಿರುಕುಳ ನೀಡಿರಬಹುದು. ಆತ ಪ್ರಾಣಿಗಳಿಗೆ ಕಿರುಕುಳ ನೀಡುವುದನ್ನೇ ಚಟವಾಗಿಸಿಕೊಂಡಿದ್ದಾನೆ ಎಂದು ಪೆಟಾ ದೂರಿನಲ್ಲಿ ಆರೋಪಿಸಿದೆ.
Advertisement
A female dog was RAPED in Kharghar. ???????? Navi Mumbai Police filed an FIR after PETA India and an animal activist registered complaints, and the accused has been arrested and charged under Section 377 of the Indian Penal Code.
— PETA India (@PetaIndia) August 22, 2019
Advertisement
ಐಪಿಸಿ ಸೆಕ್ಷನ್ 377(ಪ್ರಾಣಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸುವುದು) ಅಡಿ ಎಫ್‍ಐಆರ್ ದಾಖಲಾಗಿದ್ದು, ಈ ಪ್ರಕರಣದ ಅಡಿ ಆರೋಪ ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
Advertisement
ಒಂದು ವೇಳೆ ನಾಯಿಯ ಮೇಲೆ ಅತ್ಯಾಚಾರ ಎಸಗಿರುವ ಈತನನ್ನು ಬಿಡುಗಡೆಗೊಳಿಸಿದ್ದಲ್ಲಿ ಮನುಷ್ಯರ ಮೇಲೂ ಈತ ಅತ್ಯಾಚಾರ ಎಸಗಬಹುದು ಎಂದು ಪೆಟಾ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.