ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

Public TV
1 Min Read
Rapido

ಬೆಂಗಳೂರು: ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ಯುವತಿಯೊಬ್ಬಳ ಮೇಲೆ ರ‍್ಯಾಪಿಡೊ ಬೈಕ್‌ (Rapido Bike) ಚಾಲಕ ಮನಬಂದಂತೆ ಥಳಿಸಿರುವ ಘಟನೆ ಬೆಂಗಳೂರು ನಗರದಲ್ಲಿ (Bengaluru City) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರ‍್ಯಾಪಿಡೊ ಬೈಕ್‌ ಚಾಲಕ ಯುವತಿಗೆ (Young Women) ಕಪಾಳಕ್ಕೆ ಪಟಾರನೆ ಹೊಡೆದಿದ್ದಾನೆ. ಒಂದೇ ಏಟಿಗೆ ಯುವತಿ ಕೆಳಗೆ ಬಿದ್ದಿದ್ದು, ಸ್ಥಳೀಯರೊಬ್ಬರು ಈ ಹಲ್ಲೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ವಿಮಾನ ದುರಂತದ ಹೆಣದ ಮೇಲೆ ನಾವು ರಾಜಕೀಯ ಮಾಡಲ್ಲ, ಅದು ಬಿಜೆಪಿ, ಜೆಡಿಎಸ್ ಕೆಲಸ: ಡಿಕೆಶಿ

ಶ್ರೇಯಾ ಅನ್ನೋ ಯುವತಿ ರ‍್ಯಾಪಿಡೊ ಬುಕ್‌ ಮಾಡಿದ್ರು. ಬೈಕ್ ಚಾಲಕ ಸುಹಾಸ್ ಮಹಿಳೆಯನ್ನ ಕೂರಿಸಿಕೊಂಡು ಡ್ರೈವ್ ಮಾಡುವಾಗ ಓವರ್ ಸ್ಪೀಡ್‌ನಲ್ಲಿ (Over Speed) ಬೈಕ್ ಚಲಾಯಿಸಿದ್ದಾ‌ನೆ. ಆಗ ಓವರ್ ಸ್ಪೀಡಾಗಿ ಹೋಗದಂತೆ ಶ್ರೇಯಾ ಎಚ್ಚರಿಕೆ ನೀಡಿದ್ದಾಳೆ. ಇದೇ ವಿಚಾರಕ್ಕೆ ಶ್ರೇಯಾ ಮತ್ತು ಸುಹಾಸ್ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಸುಹಾಸ್‌, ಶ್ರೇಯಾಳ ಕಪಾಳಕ್ಕೆ ರಪ್ ಅಂತ ಬಾರಿಸಿದ್ದಾನೆ. ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಗೆ 4ನೇ ಬಲಿ – ಮರ ಬಿದ್ದು ವ್ಯಕ್ತಿ ಸಾವು

Rapido

ಜಯನಗರ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇರಾನ್‌ನ ತೈಲ ಸಂಗ್ರಹ, ಅನಿಲ ಉತ್ಪಾದನಾ ಘಟಕಗಳೇ ಇಸ್ರೇಲ್‌ಗೆ ಟಾರ್ಗೆಟ್

Share This Article